ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಮೂವರು ಮನೆಗಳ್ಳರ ಬಂಧನ
ವಿಜಯಪುರ: ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ 15,40,000 ರೂ.ಮೌಲ್ಯದ ಬೆಲೆ ಬಾಳುವ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.
ನಗರದ ಝಂಡಾ ಕಟ್ಟೆ ಹತ್ತಿರದ ಹಳಕೇರಿ ಗಲ್ಲಿ ನಿವಾಸಿ ಸಮೀರ ಊರ್ಫ್ ಪಿಕೆ ನಬಿಸಾಬ ಇನಾಮದಾರ (20), ಜೆಎಂ ರಸದ್ತೆ ದರ್ಬಾರ್ ಹೌಸ್ ನಿವಾಸಿ ಮಹ್ಮದ್ ಯೂಸುಪ್ ಅಯೂಬ್ ಕೋಟ್ಯಾಳ (22) ಹಾಗೂ ಬಾಂಗಿಚಾಳ ನಿವಾಸಿ ಸಾಹೀಲ ಹಾಪೀಜ್ ಹುಸೇನ ಬಾಂಗಿ (20) ಬಂಧಿತ ಆರೋಪಿಗಳು.
ಬಂಧಿತರು ಮೂರು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವಾಗಿ ಒಪ್ಪಿಕೊಂಡಿದ್ದಾರೆ. ಇವರಿಂದ ಒಟ್ಟು 300 ಗ್ರಾಂ ಬಂಗಾರ ಆಭರಣಗಳು ಹಾಗೂ 520 ಗ್ರಾಂ ಬೆಳ್ಳಿಯ ಆಭರಣಗಳನ್ನುಸೇರಿ 15.40 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಎಚ್.ಡಿ. ಆನಂದಕುಮಾರ ತಿಳಿಸಿದ್ದಾರೆ.
ಕಳ್ಳತನ ಪ್ರಕರಣ ಪತ್ತೆ ಹಚ್ಚಲು ಎಸ್‌ಪಿ ಎಚ್.ಡಿ. ಆನಂದಕುಮಾರ, ಎಎಸ್‌ಪಿ ಡಾ.ರಾಮ ಅರಸಿದ್ದಿ, ಡಿವೈಎಸ್‌ಪಿ ಕೆ.ಸಿ. ಲಕ್ಷ್ಮಿ ನಾರಾಯಣ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಿಎಸ್ ಸೀತಾರಾಮ ಲಮಾಣಿ, ಸೋಮೇಶ ಗೆಜ್ಜಿ, ಎಸ್.ಸಿ. ಗುರುಬೇಟ್ಟಿ, ಸಿಬ್ಬಂದಿ ಎಸ್.ಎಸ್. ಮಾಳೆಗಾಂವ, ಪಿ.ಆರ್. ಹಿಪ್ಪರಗಿ, ಬಿ.ಎಂ. ಪವಾರ, ಎಸ್.ಆರ್. ಹಂಗರಗಿ, ವೈ.ಪಿ. ಕಬಾಡೆ, ವೈ.ಆರ್. ಮಂಕಣಿ, ಪುಂಡಲಿಕ್ ಬಿರಾದಾರ, ಸದಾಶಿವ ಕಲಾದಗಿ, ಸಂತೋಷ ನಾಯಕ್, ಮೇಶ ಸಾಲಿಕೇರಿ, ಎಸ್.ಎ. ಬನಪಟ್ಟಿ, ಜೆ.ಎಸ್. ವನಜಕರ, ಯೋಗೇಶ ಮಾಳಿ, ಉಮಾಶಂಕರ ಮಕಣಾಪುರ, ಎಸ್.ಎಸ್. ಮಸಳಿ, ಆನಂದ ಕಂಬಾರ, ಕುಶಾಲ ರಾಠೋಡ, ಉಮೇಶ ಸಿಂಗೆ, ನಿಂಗಪ್ಪ ವಠಾರ ತಂಡದಲ್ಲಿದ್ದರೆಂದು ಎಸ್‌ಪಿ ಆನಂದಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.