ನಮ್ಮ ವಿಜಯಪುರ

ಶ್ರೀಗಂಧದ ಕಟ್ಟಿಗೆ ಕಳ್ಳತನದಿಂದ ಸಾಗಿಸಿದ್ದ ಅಪರಾಧಿಗೆ 5 ವರ್ಷ ಶಿಕ್ಷೆ-1 ಲಕ್ಷ ರೂಪಾಯಿ ದಂಡ

ವಿಜಯಪುರ: ಶ್ರೀಗಂಧದ ಕಟ್ಟಿಗೆಗಳನ್ನು ಕಳ್ಳತನದಿಂದ ಸಾಗಿಸುತ್ತಿದ್ದ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಜಿಲ್ಲೆಯ ಮಿಂಚನಾಳ ತಾಂಡಾದ ನಿವಾಸಿ ರವಿ ದೇವಜಿ ರಾಠೋಡ ಶಿಕ್ಷೆಗೆ ಗುರಿಯಾದ ವ್ಯಕ್ತಿ. 2019 ನ. 20ರಂದು ಇಂಡಿ ತಾಲೂಕಿನ ಮಿರಗಿ ಗ್ರಾಮದ ಜಮದಗ್ನಿ ಭೀಮರಾಯ ಹಳ್ಳಿ ಎಂಬುವರ ಜಮೀನಿನ ದಂಡೆ ಮೇಲಿದ್ದ ಶ್ರೀಗಂಧದ ಗಿಡ ಕಡಿದು ತುಂಡು ತುಂಡು ಮಾಡಿದ ಕಟ್ಟಿಗೆಗಳನ್ನು ಮೋಟರ್ ಸೈಕಲ್ ಮೇಲೆ ತೆಗೆದುಕೊಂಡು ಹೋಗುತ್ತಿರುವಾಗ ಪಿಎಸ್‌ಐ ದಾಳಿ ನಡೆಸಿದ್ದರು. ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಾಜಿ ಅನಂತ ನಲವಾಡೆ ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ಎಚ್. ಹಕೀಮ್ ವಾದ ಮಂಡಿಸಿದ್ದರು.

error: Content is protected !!