ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆ, ಯಾರು ಎಲ್ಲಿ ನಿಯೋಜನೆಗೊಂಡಿದ್ದಾರೆ ಇಲ್ಲಿದೆ ಡಿಟೇಲ್ಸ್
ವಿಜಯಪುರ: ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿರಸ್ತೇದಾರ, ಉಪ ತಹಸೀಲ್ದಾರ್ ವೃಂದದ ನೌಕರರನ್ನು ವರ್ಗಾವಣೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ (ಸೇವೆಗಳು-1) ಎಚ್.ಎಂ. ಸುದರ್ಶನ ಆದೇಶಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 96 ಅಧಿಕಾರಿಗಳನ್ನು ವರ್ಗವಣೆ ಮಾಡಲಾಗಿದೆ. ಅಥಣಿಯ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶಿರಸ್ತೇದಾರ ಆಗಿದ್ದ ಶಕುಂತಲಾ ನಿಜಗುಣಿ ಕೊಡತೆ ಇವರನ್ನು ಇಂಡಿ ತಹಸೀಲ್ದಾರ್ ಕಚೇರಿಗೆ ವರ್ಗಾಯಿಸಲಾಗಿದೆ.
ಆಲಮಟ್ಟಿಯ ವಿಶೇಷ ಭೂ ಸ್ವಾಧೀನ ಇಲಾಖೆಯ ಶಿರಸ್ತೇದಾರ ಎಸ್.ಸಿ. ಕಕ್ಕಳಮೇಲಿ ಇವರನ್ನು ದೇವರಹಿಪ್ಪರಗಿ ಉಪ ತಹಸೀಲ್ದಾರ್ ಕಚೇರಿಗೆ ವರ್ಗಾಯಿಸಲಾಗಿದೆ. ಢವಳಗಿಯ ನಾಡ ಕಚೇರಿಯಲ್ಲಿ ಉಪ ತಹಸೀಲ್ದಾರ್ ಆಗಿದ್ದ ಎಸ್.ಪಿ. ಭಾವಿಕಟ್ಟಿ ಇವರನ್ನು ಮುದ್ದೇಬಿಹಾಳ ತಹಸೀಲ್ದಾರ್ ಕಚೇರಿಗೆ ವರ್ಗಾಯಿಸಲಾಗಿದೆ. ಆರ್.ಬಿ. ಹಿರೇಮಠ ಇವರ ವಯೋನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ನಿಯೋಜಿಸಲಾಗಿದೆ. ವಿಜಯಪುರ ಮಹಾನಗರ ಪಾಲಿಕೆಯ ಕಚೇರಿ ವ್ಯವಸ್ಥಾಪಕ ಅನೀಲ ರಾಮಚಂದ್ರ ಚವಾಣ್ ಇವರನ್ನು ತಾಳಿಕೋಟಿಗೆ ವರ್ಗಾಯಿಸಲಾಗಿದೆ. ಸಂದೀಪ ಘೋರ್ಪಡೆ ಇವರಿಂದ ತೆರವಾದ ಶಿರಸ್ತೇದಾರ ಹುದ್ದೆಗೆ ಇವರನ್ನು ನಿಯೋಜಿಸಲಾಗಿದ್ದು, ಸಂದೀಪ ಅವರನ್ನು ಧಾರವಾಡದ ವಿಶೇಷ ಭೂ ಸ್ವಾಧೀನ ಅಧಿಕಾರಿ ಕೆಎಐಡಿಬಿಗೆ ವರ್ಗಾಯಿಸಲಾಗಿದೆ.