ರಾಜ್ಯ

ವಸತಿ ರಹಿತರಿಗೆ ಸಿಹಿ ಸುದ್ದಿ, ಮನೆ ಕಟ್ಟಲು ಸರ್ಕಾರದಿಂದ ಹಣ ಬಿಡುಗಡೆ !

ಸರಕಾರ ನ್ಯೂಸ್ ಬೆಂಗಳೂರು

ಆಶ್ರಯ ಮನೆಗಳಿಗಾಗಿ ತೀವ್ರ ನಿರೀಕ್ಷೆಯಲ್ಲಿದ್ದ ವಸತಿ ರಹಿತರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

ರಾಜ್ಯದಲ್ಲಿ ವಸತಿ ವಂಚಿತರಿಗೆ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದೆ. ಅಂತೆಯೇ ವಿಜಯಪುರ ಜಿಲ್ಲೆಯ ಎಲ್ಲ 13 ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ 2024-25ನೇ ಆರ್ಥಿಕ ವರ್ಷದಲ್ಲಿ ವಸತಿರಹಿತರಿಗೆ ಮನೆ ಕಟ್ಟಲು ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ.

ಆದ್ದರಿಂದ ಕೂಡಲೇ ಈ ಮನೆಗಳ ಜಿ.ಪಿ.ಎಸ್ ಮಾಡಿ, ಫಲಾನುಭವಿಗಳು ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುವ ಜವಾಬ್ದಾರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಓ)ಗಳ ಮೇಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತ್ವರಿತವಾಗಿ ಕಾರ್ಯೋನ್ಮುಖರಾಗಬೇಕಿದೆ.

ಎಸ್.ಸಿ ಫಲಾನುಭವಿಗಳಿಗೆ ರೂ. 43,750 ಮತ್ತು ಇತರೆ ಫಲಾನುಭವಿಗಳಿಗೆ ರೂ. 30,000 ಅನುದಾನವನ್ನು ಫಲಾನುಭವಿಗಳಿಗೆ ಖಾತೆಗಳಿಗೆ ನೇರವಾಗಿ ಜಮೆ ಮಾಡುತ್ತಿದೆ.

ಜಿಲ್ಲೆಯ ಆಲಮೇಲ ತಾಲೂಕಿನ 13 ಗ್ರಾ. ಪಂ ಗಳಲ್ಲಿ 511, ಬಬಲೇಶ್ವರ ತಾಲೂಕಿನ 16 ಗ್ರಾ. ಪಂ ಗಳಲ್ಲಿ 711, ಬಸವನ ಬಾಗೇವಾಡಿ ತಾಲೂಕಿನ 18 ಗ್ರಾ. ಪಂ ಗಳಲ್ಲಿ 1053, ಚಡಚಣ ತಾಲೂಕಿನ 13 ಗ್ರಾ. ಪಂ ಗಳಲ್ಲಿ 823, ದೇವರ ಹಿಪ್ಪರಗಿ ತಾಲೂಕಿನ 14 ಗ್ರಾ. ಪಂ ಗಳಲ್ಲಿ 840, ಇಂಡಿ ತಾಲೂಕಿನ 39 ಗ್ರಾ. ಪಂ ಗಳಲ್ಲಿ 1486, ಕೊಲ್ಹಾರ ತಾಲೂಕಿನ 10 ಗ್ರಾ. ಪಂ ಗಳಲ್ಲಿ 675, ಮುದ್ದೇಬಿಹಾಳ ತಾಲೂಕಿನ 22 ಗ್ರಾ. ಪಂ ಗಳಲ್ಲಿ 1307, ನಿಡಗುಂದಿ ತಾಲೂಕಿನ 11 ಗ್ರಾ. ಪಂ ಗಳಲ್ಲಿ 207, ಸಿಂದಗಿ ತಾಲೂಕಿನ 18 ಗ್ರಾ. ಪಂ ಗಳಲ್ಲಿ 457, ತಾಳಿಕೋಟಿ ತಾಲೂಕಿನ 14 ಗ್ರಾ. ಪಂ ಗಳಲ್ಲಿ 774, ತಿಕೋಟಾ ತಾಲೂಕಿನ 15 ಗ್ರಾ. ಪಂ ಗಳಲ್ಲಿ 771, ವಿಜಯಪುರ ತಾಲೂಕಿನ 17 ಗ್ರಾ. ಪಂ ಗಳಲ್ಲಿ 770 ಫಲಾನುಭವಿಗಳ ಖಾತೆಗೆ ನೇರವಾಗಿ ಯೋಜನೆಯ ಹಣ ಜಮೆ ಆಗುತ್ತಿದೆ.

error: Content is protected !!