‘ಶಾಂತಿಯುತ ಕರ್ನಾಟಕ’ ಸಹಾಯವಾಣಿಗೆ ಸಚಿವ ಎಂಬಿಪಿ ಸಲಹೆ, ಏನಿದರ ಉದ್ದೇಶ? ಇಲ್ಲಿದೆ ಡಿಟೇಲ್ಸ್…
ಸರಕಾರ ನ್ಯೂಸ್ ಬೆಂಗಳೂರ
ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಕೋಮು ಸೌಹಾರ್ದತೆ ಬಗ್ಗೆ ಮಾತನಾಡುತ್ತಿರುವ ಸಚಿವ ಎಂ.ಬಿ. ಪಾಟೀಲ, ಹಿಂದುಪರ ಸಂಘಟಕ ಚಕ್ರವರ್ತಿ ಸೂಲಿಬೆಲೆಗೆ ಖಡಕ್ ಸಂದೇಶ ರವಾನಿಸಿದ ಬೆನ್ನಲ್ಲೇ ದ್ವೇಷ ಹರಡದಂತೆ ಸಹಾಯವಾಣಿ ಸ್ಥಾಪಿಸಲು ಮಹತ್ವದ ಸಲಹೆ ನೀಡಿದ್ದಾರೆ.
ಕರ್ನಾಟಕದಲ್ಲಿ ಯಾವುದೇ ರೀತಿಯ ದ್ವೇಷ ಹರಡದಂತೆ ಮತ್ತು ಅಂತಹ ಅನಪೇಕ್ಷಿತ ಘಟನೆಗಳ ಬಗ್ಗೆ ಕಣ್ಗಾವಲು ಇರಿಸಲು "ಶಾಂತಿಯುತ ಕರ್ನಾಟಕ" ಎಂಬ ಹೊಸ ಸಹಾಯವಾಣಿಯನ್ನು ಸ್ಥಾಪಿಸುವಂತೆ ಶ್ರೀ @DrParameshwara, @PriyankKharge, @DKShivakumar, @CMofKarnataka, ಅವರಲ್ಲಿ ಮನವಿ.
ನಮ್ಮ ಗುರಿ ಅಭಿವೃದ್ಧಿ ಮತ್ತು ಪ್ರಗತಿ ಹಾಗೂ "ಬ್ರಾಂಡ್…
— M B Patil (@MBPatil) June 5, 2023
ಈ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮೂಲಕ ಗೃಹ ಸಚಿವ ಜಿ. ಪರಮೇಶ್ವರ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರಗೆ ಸಲಹೆ ನೀಡಿರುವ ಅವರು, ಕರ್ನಾಟಕದಲ್ಲಿ ಯಾವುದೇ ರೀತಿಯ ದ್ವೇಷ ಹರಡದಂತೆ ಮತ್ತು ಅಂತಹ ಅನಪೇಕ್ಷಿತ ಘಟನೆಗಳ ಬಗ್ಗೆ ಕಣ್ಗಾವಲು ಇರಿಸಲು ‘ಶಾಂತಿಯುತ ಕರ್ನಾಟಕ’ ಎಂಬ ಹೊಸ ಸಹಾಯವಾಣಿ ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ.