ಸರ್ಕಾರಿ ಇಂಜಿನೀಯರ್ ಗಳಿಗೆ ಬೆಳ್ಳೆಂಬೆಳಗ್ಗೆ ಲೋಕಾ ಶಾಕ್ !
ವಿಜಯಪುರ: ಭ್ರಷ್ಟಾಚಾರದ ಆರೋಪದ ಮೇರೆಗೆ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳೆಂಬೆಳಗ್ಗೆ ಶಾಕ್ ನೀಡಿದ್ದಾರೆ.
ಬುಧವಾರ ಜಿಲ್ಲೆಯಲ್ಲಿ ಇಬ್ಬರ ಅಧಿಕಾರಿಗಳ ಮನೆ ಮೇಲೆ ನಾಲ್ಕು ಕಡೆಗಳಲ್ಲಿ ದಾಳಿ ನಡೆದಿದೆ.
ದಿಢೀರ್ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.
ಪಿಡಬ್ಲೂಡಿ ಇಲಾಖೆ ಜೆಇ ಭೀಮನಗೌಡ ಬಿರಾದಾರ ಮನೆ ಹಾಗೂ ಸಂಬಂಧಿ ಶ್ರೀಕಾಂತ್ ಅಂಗಡಿ ಮನೆ ಮೇಲೆ ದಾಳಿ ಮಾಡಿದ್ದಾರೆ. ಪಿಡಬ್ಲೂಡಿ ಇಲಾಖೆ ಬಸವನಬಾಗೇವಾಡಿ ವಿಭಾಗದಲ್ಲಿ ಪ್ರಭಾರಿ ಎಇಇ ಆಗಿ ಭೀಮನಗೌಡ ಬಿರಾದಾರ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಜಯಪುರ ನಗರದ ಆರ್ ಟಿ ಓ ಕಚೇರಿ ಹಿಂಭಾಗದಲ್ಲಿ ಭೀಮನಗೌಡ ಬಿರಾದಾರ ಮನೆ ಇದೆ. ಅಲ್ಲದೇ, ಮುದ್ದೇಬಿಹಾಳ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಸಿಸ್ಟೆಂಟ್ ಎಇಇ ಜೆಪಿ ಶೆಟ್ಟಿ ಮನೆಯ ಸ್ವಗ್ರಾಮವಾದ ಸಾಸನೂರನಲ್ಲಿರುವ ಮನೆ ಮೇಲೆ ವಿಜಯಪುರ ಲೋಕಾಯುಕ್ತ ಎಸ್ ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ನಾಲ್ಕು ಕಡೆಗಳಲ್ಲಿ 3 ಡಿವೈಎಸ್ಪಿ,7 ಇನ್ಸಪೆಕ್ಟರ್ ನೇತೃತ್ವದಲ್ಲಿ ದಾಳಿಗೈದಿದ್ದಾರೆ.