ಚಿಕ್ಕಬಳ್ಳಾಪುರ

ಮೊಬೈಲ್‌ ಟಾವರ್‌ ಹಾಕುತ್ತೇವೆಂದು ನಂಬಿಸಿ ಮೋಸ, ಆಸ್ತಿ ವಿವರ ಪಡೆದು ದೋಖಾ, ಕಳೆದುಕೊಂಡ ಹಣ ಎಷ್ಟು ಗೊತ್ತಾ? ಮಹಾ ಜನರೇ ಹುಷಾರ್‌ !!!

ಸರಕಾರ ನ್ಯೂಸ್‌ ಚಿಕ್ಕಬಳ್ಳಾಪುರ

ಮನೆ ಮೇಲೆ ಮೊಬೈಲ್‌ ಟಾವರ್‌ ಹಾಕುವುದಾಗಿ ನಂಬಿಸಿ ಲಕ್ಷಕ್ಕೂ ಅಧಿಕ ಹಣ ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರದ ಕಣಜೇನಹಳ್ಳಿ ನಿವಾಸಿ ರೇವತಿ ಕುಮಾರಿ ಕೊಂ ಲೋಕೇಶ (38) ಎಂಬುವವರು ಮೋಸಕ್ಕೆ ಒಳಗಾಗಿದ್ದು, ಬರೋಬ್ಬರಿ 1.70 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಘಟನೆ ವಿವರ:

ಜ. 18ರಂದು ರೇವತಿ ಮೊಬೈಲ್‌ಗೆ ಸಂದೇಶ ಬಂದಿದ್ದು ಅದನ್ನು ತೆಗೆದು ನೋಡಲಾಗಿ “5 ಜಿ” ಟವರ್‌ ತಿಂಗಳ ಬಾಡಿಗೆ 25 ಸಾವಿರ ರೂಪಾಯಿ ಹಾಗೂ ಅಡ್ವಾನ್ಸ್‌ 20 ಲಕ್ಷ ಎಂದು ಮೊಬೈಲ್‌ ಕಾಂಟ್ಯಾಕ್ಟ್‌ ನಂಬರ್‌ ನೀಡಿದ್ದಾರೆ. ಆ ನಂಬರ್‌ಗೆ ಕರೆ ಮಾಡಲಾಗಿ ಟವರ್‌ ಹಾಕಲು ನಿಮ್ಮ ಜಾಗದ ಪಹಣಿ, ಆಧಾರ್‌ ಕಾರ್ಡ್‌ ಪ್ರತಿ ಕಳುಹಿಸಿದರೆ ಅದನ್ನು ಗೂಗಲ್‌ ಮ್ಯಾಪ್‌ನಲ್ಲಿ ಪರಿಶೀಲಿಸಿ ರೇಡಿಯೇಶನ್‌ ಶೇ.90 ಬಂದರೆ ಮಾತ್ರ ನಾವು ಟವರ್‌ ಇನ್ಸಾಟಾಲೇಶನ್‌ ಮಾಡುವುದಾಗಿ ತಿಳಿಸಿದರು. ನಂತರ ಜ. 20ರಂದು ಕರೆ ಮಾಡಿ ನಿಮ್ಮ ಜಾಗ ಸೆಲೆಕ್ಟ್‌ ಆಗಿದೆ ಡಿಜಿಟಲ್‌ ಕ್ಯಾಮರಾದಲ್ಲಿ ದಾಖಲಾಗಿದ ಎಂದು ತಿಳಿಸಿ, ನಿಮ್ಮ ಖಾಲಿ ಜಾಗದ ದಾಖಳೆಗಳು, ನಿಮ್ಮ ಆಧಾರ್‌ ಕಾರ್ಡ್‌ ಪ್ರತಿ ಮತ್ತು ಪಾನ್‌ ಕಾರ್ಡ್‌ ಪ್ರತಿ ಮತ್ತು ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ ಕಳುಹಿಸುವಂತೆ ತಿಳಿಸಿದ್ದಾರೆ. ಜೊತೆಗೆ ಪ್ರೊಸೆಸಿಂಗ್‌ ಫೀ ಎಂದು 6500 ರೂಪಾಯಿ ಅಕೌಂಟ್‌ಗೆ ಹಾಕಿಸಿಕೊಂಡಿದ್ದಾರೆ. ಬಳಿಕ ಪಾನ್‌ ಕಾರ್ಡ್‌ ಕನ್ಫರ್ಮೇಶನ್‌ ಮಾಡಿಕೊಂಡು, ದಾಖಲೆ ಪರಿಶೀಲಿಸಿದ್ದಾರೆ.

15 ಲಕ್ಷ ಹಣಕ್ಕೆ ಬೇಡಿಕೆ:

ಜ. 21 ರಂದು ಪುನಃ ಕರೇ ಮಾಡಿ ನಿಮ್ಮ ಖಾತೆಗೆ 15 ಲಕ್ಷ ಹಣ ವರ್ಗಾವಣೆ ಮಾಡಬೇಕಾದರೆ ನೀವು ಎಫ್‌ ಆರ್‌ ಚಾರ್ಜ್‌ 46770 ರೂಪಾಯಿ ಕಟ್ಟಬೇಕೆಂದಿದ್ದಾರೆ.  ಅಲ್ಲದೇ ಡಿಡಿ ಮಾಡಲು ಕಮೀಷನ್‌ ಹಣ ಎಂದು 77500 ರೂಪಾಯಿ ಕಳುಹಿಸಲು ತಿಳಿಸಿದರು. ಹೀಗಾಗಿ ಹೆಚ್ಚಿನ ಬಾಡಿಗೆ ಆಸೆಯಿಂದ ರೇವತಿಕುಮಾರಿ 77500 ರೂಪಾಯಿ ಹಾಕಿದ್ದಾರೆ. ಬಳಿಕ ಪುನಃ ಕರೆ ಮಾಡಿ 15 ಲಕ್ಷ ಡಿಡಿ ರೆಡಿಯಾಗಿದೆ ಡಿಡಿಯನ್ನು ಇನ್ಸಾಟಾಲೇಶನ್‌ ಐಟಂ ಜೊತೆಯಲ್ಲಿ ನಿಮ್ಮ ಕೈಗೆ ತಲುಪಿಸುತ್ತೇವೆ ಎಂದಿದ್ದಾರೆ. ಬಳಿಕ ಪುನಃ ಕರೆ ಮಾಡಿ ಅಪ್ರೂವಲ್‌ ಮಾಡಲು ಮ್ಯಾನೇಜರ್‌ ಕಮೀಷನ್‌ ಕೇಳುತ್ತಿದ್ದಾರ ಎಂದು 39500 ರೂ. ಪಡೆದಿದ್ದಾರೆ. ಬಳಿಕ ಸಬೂಬು ಹೇಳುತ್ತಲೇ ಬಂದಿದ್ದು ಕೊನೆಗೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದಾರೆ. ಹೀಗೆ ಒಟ್ಟು 1,70,700 ರೂಪಾಯಿ ಆನ್‌ಲೈನ್‌ ಮೂಲಕ ಪಡೆದು ಮೋಸ ಮಾಡಿದ್ದಾರೆ.

ಹೀಗಾಗಿ ಮೋಸಕ್ಕೆ ಒಳಗಾದ ರೇವತಿ ಕುಮಾರಿ ಚಿಕ್ಕಬಳ್ಳಾಪುರ ಸಿಇಎನ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!