ವಿಜಯಪುರ

ಪಂಚಮಸಾಲಿ 2ಎ ಮೀಸಲಾತಿ ಹೋರಾಟ, ಜೂ.27 ರಂದು ಸಿಎಂ ನಿವಾಸದ ಎದುರು ಹೋರಾಟ, ಜಗದ್ಗುರು ಬಸವಯಜಯ ಮೃತ್ಯುಂಜಯ ಶ್ರೀ ಹೇಳಿದ್ದೇನು?

ಸರಕಾರ್ ನ್ಯೂಸ್ ವಿಜಯಪುರ

ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಹೋರಾಟ ಮತ್ತೆ ತೀವ್ರ ರೂಪ ಪಡೆಯಲಿದ್ದು, ದಿ.27 ರಂದು ಶಿಗ್ಗಾಂವದಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಇನ್ನೊಂದು ಹಂತದ ಹೋರಾಟಕ್ಕೆ ಚಾಲನೆ ದೊರಕಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಕೊಡಲು ಸಾಧ್ಯವೋ ಅಥವಾ ನಿಮ್ಮಿಂದ ಸಾಧ್ಯವಿಲ್ಲವೋ ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು. ವಿನಾಕಾರಣ ಆಶ್ವಾಸನೆ ನೀಡಿ ವಿಳಂಬ ನೀತಿ ಅನುಸರಿಸಬಾರದು ಎಂದರು.

ದಿ.27 ರಿಂದ ಮುಖ್ಯಮಂತ್ರಿಗಳ ಶಿಗ್ಗಾವಿ ನಿವಾಸದ ಎದುರು ಬೃಹತ್‌ ಹೋರಾಟ ನಡೆಸಲಾಗುವುದು.
ಅಲ್ಲಿಂದ ಇನ್ನೊಂದು ಹಂತದ ಹೋರಾಟ ಆರಂಭಗೊಳ್ಳಲಿದ್ದು, ಪ್ರತಿ ಜಿಲ್ಲಾ‌ ಕೇಂದ್ರಗಳಲ್ಲಿ ನಿರಂತರ ಹೋರಾಟ ನಡೆಸಲಾಗುದು ಎಂದರು.

ಶೇ.80 ರಷ್ಟು ಪಂಚಮಸಾಲಿ ಸಮುದಾಯದ‌ ಜನತೆ ಬೆಂಬಲಿಸುತ್ತಾ ಬಂದಿದ್ದಾರೆ, ಈ ಸಮುದಾಯ ನ್ಯಾಯ ಕೇಳುತ್ತಿದೆ, ಮುಖ್ಯಮಂತ್ರಿಗಳ ಗಾದಿ ಕೇಳುತ್ತಿಲ್ಲ. ಸಮಾಜದ ಬಡ ಜನರಿಗೆ ಅನುಕೂಲವಾಗಲು ಮೀಸಲಾತಿ ಕೇಳುತ್ತಿದ್ದೇವೆ, ಇದು ನ್ಯಾಯಯುತವಾದ ಹಕ್ಕೊತ್ತಾಯ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ
ಮಾತು ಕೊಟ್ಟ ಹಿನ್ನೆಲೆಯಲ್ಲಿ ಅವರ ಮೇಲೆ ನಂಬಿಕೆ ಇರಿಸಿ ಹೋರಾಟವನ್ನು ಮೊಟಕುಗೊಳಿಸಿದ್ದೆವು. ಸರ್ಕಾರ ನುಡಿದಂತೆ ನಡೆಯಲಿಲ್ಲ, ಪಂಚಮಸಾಲಿ ಸಮಾಜದವರಿಗೆ ನೋವಾಗಿದೆ, ತಾಳ್ಮೆ ಪರೀಕ್ಷೆ ಮಿತಿಇದೆ. ಇನ್ನಾದರೂ ಸರ್ಕಾರ ತನ್ನ ನಿಲುವು ಸ್ಪಷ್ಟವಾಗಿ ತಿಳಿಸಬೇಕು ಎಂದರು.

ಸರಿಸುಮಾರು 25 ಲಕ್ಷ ಸಮಾಜ ಬಾಂಧವರು ಸೇರಿಸಿ ಬೃಹತ್ ಧರಣಿ ನಡೆಸುವ ಚಿಂತನೆ ನಡೆದಿದೆ, ಮೀಸಲಾತಿ ದೊರಕಿದರೆ ಬೃಹತ್ ಜನಸಮೂಹದಲ್ಲಿ ಸರ್ಕಾರಕ್ಕೆ ಸನ್ಮಾನ ನೆರವೇರಿಸಲಾಗುವುದು, ಮುಖ್ಯಮಂತ್ರಿಗಳಿಗೆ ಶೇಂಗಾ ಹೋಳಿಗೆ ತಿನಿಸಿ, ಕಲ್ಲು ಸಕ್ಕರೆ ತುಲಾಭಾರ ನೆರವೇರಿಸಿ ಆಭಾರ ಮನ್ನಣೆ ಮಾಡಲಾಗುವುದು, ಇಲ್ಲವೇ ಹೋರಾಟ ಮುಂದುವರೆಸಲಾಗುವುದು ಮುಂದುವರೆಸಲಾಗುವುದು ಎಂದರು.

ಮುಖರಾದ ಬಿ.ಎಂ. ಪಾಟೀಲ, ಎಂ.ಎಸ್. ರುದ್ರಗೌಡರ, ಶಂಕರಗೌಡ ಬಿರಾದಾರ, ನಿಂಗನಗೌಡ ಸೊಲಾಪೂರ, ಶೋಭಾ ಬಿರಾದಾರ ಮತ್ತಿತರರು ಇದ್ದರು.

error: Content is protected !!