ನಮ್ಮ ವಿಜಯಪುರ

ಬಸ್‌-ಕಾರ್‌ ಮಧ್ಯೆ ಮುಖಾಮುಖಿ ಡಿಕ್ಕಿ, ಹಲವರಿಗೆ ಗಾಯ

ಸರಕಾರ್‌ ನ್ಯೂಸ್‌ ವಿಜಯಪುರ

ಕರ್ನಾಟಕ ಸಾರಿಗೆ ಬಸ್‌ ಮತ್ತು ಕಾರ್‌ ಮಧ್ಯೆ ಮುಖಾಮುಖಿ ಡಿಕ್ಕಿಸಂಭವಿಸಿದ್ದು, ಪ್ರಯಾಣಿಕರು ಹಾಗೂ ಕಾರ್‌ ಚಾಲಕ ಗಾಯಗೊಂಡಿದ್ದಾರೆ.

ವಿಜಯಪುರ-ಸೋಲಾಪುರ ರಸ್ತೆಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಘಟನೆಯಲ್ಲಿ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಮತ್ತು ಕಾರ್‌ ಚಾಲಕ ಗಾಯಗೊಂಡಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಲಾಪುರ, ವಿಜಯಪುರ, ರಾಯಚೂರ ಬಸ್‌ (ಕೆಎ-36, ಎಫ್‌ 1517) ಹಾಗೂ ಕಾರ್‌ ನಂ. ಕೆಎ 38 ಎ 3375 ಮಧ್ಯೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!