ಪಂಚಮಸಾಲಿ ಸಮಾಜಕ್ಕೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ, ಶಾಸಕ ಯತ್ನಾಳ ವಿಶ್ವಾಸ ವ್ಯಕ್ತ, ಹೈಕಮಾಂಡ್ ಹೇಳಿದ್ದೇನು?
ಸರಕಾರ್ ನ್ಯೂಸ್ ವಿಜಯಪುರ
ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಕರೆ ಮಾಡಿ ಸಭೆ ಕರೆಯುವುದಾಗಿ ಹೇಳಿದ್ದು, ಬೇಡಿಕೆ ಈಡೇರಿಸಲು ಅಸ್ತು ಎಂದಿರುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಕೇಂದ್ರದಿಂದ ಒಳ್ಳೆಯ ಸುದ್ದಿ ಬಂದಿದೆ. ಮೀಸಲಾತಿ ವಿಚಾರದಲ್ಲಿ ಹೈಕಮಾಂಡ್ ಹಾಗೂ ಪಕ್ಷ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದೆ. ಕಳೆದ ಎರಡು ವರ್ಷಗಳಿಂದ ಕೂಡಲಸಂಗಮ ಶ್ರೀಗಳ ತಪ್ಪಸ್ಸು ಪಾದಯಾತ್ರೆಯ ಪ್ರತಿಫಲ
ಮಕರ ಸಂಕ್ರಮಣದ ಉತ್ತರಾಯಣದ ಶುಭ ಪ್ರಸಂಗದಲ್ಲಿ ನಿಲುವು ತೆಗೆದುಕೊಂಡಿದೆ. ಆದಷ್ಟು ಬೇಗ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಕೇಂದ್ರ ನಾಯಕರ ಭೇಟಿಗಾಗಿ ಹೋಗುತ್ತಿದ್ದೇವೆ. ಕೇಂದ್ರ ಸರ್ಕಾರ ಶೀಘ್ರವೇ ಒಳ್ಳೆಯ ಸುದ್ದಿ ಕೊಡಲಿದೆ ಎಂದು ಭಾನುವಾರ ಸುದ್ದಿಗಾರರಿಗೆ ಅವರು ತಿಳಿಸಿದರು
ಕೆಲವು ಚಿಲ್ಲರೆ ಹೇಳಿಕೆಗೆ ಚಿಲ್ಲರೆ ವ್ಯಕ್ತಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದು ಎಂದು ಕೇಂದ್ರದ ನಾಯಕರು ಸೂಚನೆ ನೀಡಿದ್ದಾರೆ. ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ. ಹೀಗಾಗಿ ಸಂಸ್ಕಾರ ಇಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವುದಿಲ್ಲ ಎಂದರು.
ಜೆ.ಪಿ.ನಡ್ಡಾ ಆಗಮನ:
ಇದೇ ಜನವರಿ 21ರಂದು ವಿಜಯಪುರಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ದಾ ಆಗಮಿಸುತ್ತಿದ್ದಾರೆ. ಮೀಸಲಾತಿ ವಿಚಾರವನ್ನು ಕೇಂದ್ರದ ವರಿಷ್ಠ ಮಂಡಳಿ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ದೊಡ್ಡ ಸಮುದಾಯಕ್ಕೆ ಚುನಾವಣೆ ಪೂರ್ವ ನ್ಯಾಯ ಕೊಡದಿದ್ದರೆ ಅದರ ಪರಿಣಾಮ ಏನಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಮಾಡುತ್ತಿದ್ದಾರೆ.
ಟಿಕೆಟ್ ವಿಚಾರ:
ಯತ್ನಾಳಗೆ ಈ ಬಾರಿ ಟಿಕೆಟ್ ನೀಡಲ್ಲ, ಪಕ್ಷ ಬಿಟ್ಟು ಹೋಗಬೇಕು ಎಂದಿರುವ ಸಚಿವ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ, ಪಕ್ಷ ಯಾರಪ್ಪಂದು? ಪಕ್ಷ ಕಟ್ಟಿದವರು ನಾವು. ಹಳ್ಳಿಯಲ್ಲಿ ಹೋಗುವ ರೈತರನ್ನು ಕೇಳಿದರೂ ಬಿಜೆಪಿ ಕಟ್ಟಿದವರು ಯತ್ನಾಳಎಂದು ಹೇಳುತ್ತಾರೆ. ನಮ್ ಯತ್ನಾಳ್ ಗೌಡಪ್ಫಾ ಪಾರ್ಟಿ ಕಟ್ಯಾನ್. ಅಂವಾ ಕಮಲದ ಹೂ ನಮ್ಮೂರಿಗೆ ತಂದಾವಾ ಎನ್ನುತ್ತಾರೆ. ನನಗೆ ಪಕ್ಷದಿಂದ ಹೊರ ಹಾಕುವ ತಾಕತ್ತು ಯಾರಿಗಿಲ್ಲ ಎಂದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)