ನಮ್ಮ ವಿಜಯಪುರ

ಆಕಸ್ಮಿಕ ವಿದ್ಯುತ್ ಅವಘಡಕ್ಕೆ ಎತ್ತುಗಳ ಬಲಿ, ಮಣಂಕಲಗಿ ಗ್ರಾಮದಲ್ಲಿ ಮನಕಲಕುವ ಘಟನೆ, ಅಯ್ಯೋ ದುರ್ವಿಧಿಯೇ?

ಸರಕಾರ್‌ ನ್ಯೂಸ್ ಚಡಚಣ

ಮೂಕ ಪ್ರಾಣಿಗಳು ಒಂದಿಲ್ಲಾ ಒಂದು ಕಾರಣಕ್ಕೆ ಅಸುನೀಗುತ್ತಲೇ ಇದ್ದು, ಇವುಗಳನ್ನೇ ನಂಬಿದ ರೈತ ಮಾತ್ರ ಕಣ್ಣೀರಾಗುತ್ತಲೇ ಇರುತ್ತಾನೆ.

ಇದಕ್ಕೆ ಪೂರಕ ಎಂಬಂತೆ ಆಕಸ್ಮಿಕವಾಗಿ ತಗುಲಿದ ವಿದ್ಯುತ್ ತಂತಿಯಿಂದಾಗಿ ಎರಡು ಎತ್ತುಗಳ ಅಸುನೀಗಿದ್ದು, ಅವುಗಳನ್ನೇ ಆಶ್ರಯಿಸಿದ್ದ ಅನ್ನದಾತ ಅಕ್ಷರಶಃ ಕಂಗಾಲಾಗಿದ್ದಾನೆ.

ಅಂದಹಾಗೆ ಇಂಥದ್ದೊಂದು ಘಟನೆ ನಡೆದಿದ್ದು ಚಡಚಣ ತಾಲೂಕಿನ ಮಣಂಕಲಗಿ ಗ್ರಾಮದಲ್ಲಿ. ರೈತ ದ್ಯಾಮಗೊಂಡ ಲಕ್ಷ್ಮಣ ಏಳಗಿ ಎಂಬುವರಿಗೆ ಸೇರಿದ ಲಕ್ಷಾಂತರ ರೂ. ಮೌಲ್ಯದ ಎತ್ತುಗಳು ಸಾವು ಮಂಗಳವಾರ ಸಾವಿಗೀಡಾಗಿವೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!