ವಿಜಯಪುರದಲ್ಲಿ ಡಿಸೇಲ್ ಟ್ಯಾಂಕರ್ ಪಲ್ಟಿ, ಬಾಟಲಿ, ಕೊಡ, ಬಕೆಟ್ ತಂದ ಜನ, ಮುಗಿಬಿದ್ದ ಜನರನ್ನು ಚದುರಿಸಲು ಪೊಲೀಸರ ಹರಸಾಹಸ
ಸರಕಾರ್ ನ್ಯೂಸ್ ವಿಜಯಪುರ
ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಡಿಸೇಲ್ ಟ್ಯಾಂಕರ್ ಪಲ್ಟಿಯಾಗಿದ್ದು, ಇದರಿಂದ ಸೋರಿಕೆಯಾದ ಡಿಸೇಲ್ ತುಂಬಿಸಿಕೊಳ್ಳಲು ಜನ ಮುಗಿಬಿದ್ದರು.
ವಿಜಯಪುರದ ಹೈಪರ್ ಮಾರ್ಟ್ ಬಳಿಯ ರಾಷ್ಟ್ರೀಯ ಹೆದ್ದಾರಿ – 50 ರಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ಕಲಬುರಗಿಯಿಂದ ವಿಜಯಪುರ ಮಾರ್ಗವಾಗಿ ತಿಕೋಟಾಗೆ ಹೊರಟಿದ್ದ ಟ್ಯಾಂಕರ್
ನಗರದ ಹೊರ ವಲಯದ ಹೈಪರ್ ಮಾರ್ಟ್ ಬಳಿ ಉರುಳಿ ಬಿದ್ದಿದೆ.
ಡಿಸೈಲ್ ಟ್ಯಾಂಕರ್ ನಿಂದ ಅಪಾರ ಪ್ರಮಾಣದ ಡಿಸೇಲ್ ಸೋರಿಕೆಯಾಗಿ ರಸ್ತೆ ಪಕ್ಕದ ತಗ್ಗಿನಲ್ಲಿ ಸಂಗ್ರಹಗೊಂಡಿತು. ಸ್ಥಳೀಯರು ವಾಟರ್ ಬಾಟಲ್ ಹಾಗೂ ಇತರ ವಸ್ತುಗಳಲ್ಲಿ ಡಿಸೈಲ್ ತುಂಬಿಕೊಳ್ಳಲು ಮುಗಿಬಿದ್ದರು.
ಸ್ಥಳಕ್ಕೆ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಹಾಗೂ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಜನರನ್ನು ಚದುರಿಸಲು ಹರಸಾಹಸಪಟ್ಟರು.