ಗೋಳಗುಮ್ಮಟದಲ್ಲಿ ಯೋಗ ದಿನ ಆಚರಣೆ, ಗಮನ ಸೆಳೆದ ಬುರ್ಖಾಧಾರಿಗಳು, ಹೇಗಿತ್ತು ಗೊತ್ತಾ ಯೋಗದ ಸಂಭ್ರಮ?
ಸರಕಾರ್ ನ್ಯೂಸ್ ವಿಜಯಪುರ
ಭಾರತೀಯ ಪ್ರಾಚೀನ ಸಂಪ್ರದಾಯಗಳಲ್ಲೊಂದಾದ ಯೋಗ ಪದ್ಧತಿ ಯಾವುದೇ ಜಾತಿ, ಧರ್ಮ, ಮತ, ಪಂಥಗಳಿಗೆ ಸೀಮಿತವಾದುದಲ್ಲ ಎಂಬುದಕ್ಕೆ ಇಲ್ಲೊಂದು ಸನ್ನಿವೇಶವೇ ಸಾಕ್ಷಿ.
ಪ್ರಪಂಚದಾದ್ಯಂತ ಆಚರಿಸಲ್ಪಡುತ್ತಿರುವ ಯೋಗ ದಿನಾಚರಣೆಯಲ್ಲಿ ಸರ್ವ ಸಮಾಜದವರು ಒಟ್ಟಾಗಿ ಭಾಗಿಯಾಗಿರುವುದು ವಿಶೇಷಗಳಲ್ಲೊಂದು.
ಆದಿಲ್ ಶಾಹಿ ಸುಲ್ತಾನರು ಕಟ್ಟಿಸಿದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ನೂರಾರು ಮುಸ್ಲಿಂ ಯುವಕ-ಯುವತಿಯರು ಭಾಗಿಯಾಗಿದ್ದರು. ಗೋಳಗುಮ್ಮಟ ಆವರಣದಲ್ಲಿ ಅನೇಕ ಯುವತಿಯರು ಬುರ್ಖಾ ಧರಿಸಿಯೇ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದು ಮಾತ್ರವಲ್ಲ ವಿವಿಧ ಆಸನಗಳನ್ನು ಹಾಕಿ ಗಮನ ಸೆಳೆದರು.
ಶಾಲೆ ಮಕ್ಕಳು ಹಿಜಾಬ್ ಧರಿಸಿ ಯೋಗ ಆಸನ ಮಾಡಿದ್ದು ವಿಶೇಷವಾಗಿತ್ತು. ಇದರಿಂದ ಯೋಗ ಯಾವುದೇ ಧರ್ಮ, ಜಾತಿ, ಮತ, ಪಂಥಗಳಿಗೆ ಸೀಮಿತವಾದದ್ದು ಅಲ್ಲ. ಅದೊಂದು ಜೀವನ ಪದ್ಧತಿ ಎಂಬ ಉದ್ಘಾಟಕರಾಗಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಅವರ ಮಾತು ಅಕ್ಷರಶಃ ನಿಜವೆನ್ನಿಸಿತು.