ಪಾಡ್ಯ ಮುಗಿಸಿ ಹೊರಟಿದ್ದ ವಾಹನ ಪಲ್ಟಿ, ಗಾಯಾಳುಗಳಿಗೆ ಶಾಸಕ ನಡಹಳ್ಳಿ ಆಸರೆ….!
ಸರಕಾರ್ ನ್ಯೂಸ್ ಮುದ್ದೇಬಿಹಾಳ
ದೀಪಾವಳಿ ಪಾಡ್ಯದಂದು ನಡೆದ ಜಾತ್ರೆ, ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಹೊರಟಿದ್ದ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದು 15 ಜನರು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಡವಿ ಹುಲಗಬಾಳ ಗ್ರಾಮದ ಬಳಿ ನಡೆದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದಂತೆ ಸ್ಥಳಕ್ಕೆ ಶಾಸಕ ನಡಹಳ್ಳಿ ಭೇಟಿ ನೀಡಿ ಗಾಯಗೊಂಡಿರುವ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ತಮ್ಮ ಸರ್ಕಾರಿ ವಾಹನ ನೀಡಿ ಮಾನವೀಯತೆ ಮೆರೆದರು. ಎಲ್ಲರಿಗೂ ಮುದ್ದೇಬಿಹಾಳದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಮತ್ತು ತುರ್ತು ಚಿಕಿತ್ಸೆ ನೀಡಲಾಗಿದೆ. ಮುದ್ದೇಬಿಹಾಳ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.