ನಮ್ಮ ವಿಜಯಪುರ

ಕಾಂಗ್ರೆಸ್‌ ವಿರುದ್ಧ ಸಂಸದ ರಮೇಶ ಜಿಗಜಿಣಗಿ ತೀವ್ರ ವಾಗ್ದಾಳಿ, ಕಾರಣವೇನು ಗೊತ್ತಾ?

ಸರಕಾರ ನ್ಯೂಸ್‌ ವಿಜಯಪುರ

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಂಸದ ರಮೇಶ ಜಿಗಜಿಣಗಿ ಹರಿಹಾಯ್ದಿದ್ದಾರೆ.

ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಮಾಜಿ ಸಚಿವ ನಾಗೇಂದ್ರ ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಇದರಿಂದ ದಲಿತರಿಗೆ ಅನ್ಯಾಯವಾಗಿದೆ ಎಂದು ಗುರುವಾರ ಸುದ್ದಿಗಾರರಿಗೆ ಅವರು ತಿಳಿಸಿದರು.

ನಾನು ಹಿಂದೆ ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ ಈ ರಾಜ್ಯದ ದಲಿತ ಬಂಧುಗಳಿಗೆ ಗಂಗಾ ಕಲ್ಯಾಣ ಯೋಜನೆ ಮಾಡಿದ್ಧೆ. ನೀರಾವರಿ ಆಗಬೇಕು, ಯಾರಿಗೆ ಜಮೀನು ಇಲ್ಲ ಜಮೀನು ಕೊಡಿಸಬೇಕು ಅಂತಾ ಗಂಗಾ ಕಲ್ಯಾಣ ಯೋಜನೆ ಹುಟ್ಟು ಹಾಕಿದೆ. ಆದರೆ, ಇಂದಿನ ಸರ್ಕಾರದ ದಲಿತರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದೆ. ಮಾಜಿ ಸಚಿವ ನಾಗೇಂದ್ರ ಅವರು 43.33 ಕೋಟಿ ರೂ ಹಣವನ್ನ ಎಸ್‌ ಸಿ ಮತ್ತು ಎಸ್‌ಟಿ ಕಾರ್ಪೋರೇಷನ್ ನಿಂದ  ತೆಗೆದು ವಾಲ್ಮೀಕಿ ಸಮುದಾಯದ ಖಾತೆಗೆ ವರ್ಗಾಯಿಸಿ  ಅವ್ಯವಹಾರ ಮಾಡಿದ್ದಾರೆ. ಇದು ಕೇವಲ ನಾಗೇಂದ್ರ ಒಬ್ಬರ ನಾಚಿಗೇಡಿನ ಕೆಲಸ ಅಲ್ಲ, ಇಡೀ ಸರ್ಕಾರಕ್ಕೆ ಇದು ಅತ್ಯಂತ ನಾಚಿಗೇಡಿನ ಕೆಲಸ ಎಂದರು.

ಸಚಿವ ಜಮೀರ್ ಅಹ್ಮದ್ ಗೆ ಶಾಸಕ ಯತ್ನಾಳ ತಿರುಗೇಟು, ವಕ್ಫ್ ಆಸ್ತಿ ಬಗ್ಗೆ ಯತ್ನಾಳ ಹೇಳಿದ್ದೇನು?

ಕಾಂಗ್ರೆಸ್  ನವರು ಚುನಾವಣೆ ಬಂದಾಗ ಮುಸ್ಲಿಂರು, ದಲಿತರು, ಹಿಂದುಳಿದ ವರ್ಗದವರು ಒಟ್ಟಾಗಿ ಇರಬೇಕು ಅಂತಾ ಹೇಳುತ್ತಾರೆ. ಆದರೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿನೇ ಈ ಎಲ್ಲ ಸಮುದಾಯಗಳಿಗೆ ವಿರುದ್ಧವಾಗಿ ಇದ್ದಾರೆ. ದಲಿತ ಸಮುದಾಯಗಳ ತುಷ್ಠೀಕರಣ ಮಾಡುವ ಕಾಂಗ್ರೆಸ್‌ ಅವರ ಅನುದಾನ ದುರ್ಬಳಕೆ ಮಾಡಿಕೊಂಡಿದ್ದು ನಾಚಿಕೆಗೇಡು ಅಲ್ಲವಾ? ಎಂದು ಜಿಗಜಿಣಗಿ ಪ್ರಶ್ನಿಸಿದರು.

ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್‌ ಕೊಡುಗೆ ಅಪಾರ ಎನ್ನುವ ಕಾಂಗ್ರೆಸ್‌ನವರಿಗೆ ಬಹಳಷ್ಟು ವಿಷಯ ಗೊತ್ತಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಹೋರಾಡಿದ್ದಾರೆ. ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು.

ಸಿದ್ಧರಾಮಯ್ಯ ಚುನಾವಣೆಗೋಸ್ಕರ ಗ್ಯಾರಂಟಿ ಯೋಜನೆ ಜಾರಿ ಮಾಡಿದರು. ಇಲ್ಲವಾದರೆ ಚುನಾವಣೆ ಮುಂಚೆ ಗ್ಯಾರಂಟಿ ಯೋಜನೆಗಳನ್ನು ಮಾಡಬೇತ್ತಲ್ಲವಾ? ಚುನಾವಣೆ ಬಂದಾಗಲೇ ಏಕೆ ಮಾಡಬೇಕು? ಇಂಥಹ ಹೇಯ ಕೃತ್ಯಗಳನ್ನು ಬಿಟ್ಟು ಬಿಡಿ ಎಂದು ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ ಕಳೆದ ಒಂದುವರೆ ವರ್ಷದಿಂದ ಯಾವುದೆ ಅಭಿವೃದ್ಧಿ ಕೆಲಸಗಳಾಗಿಲ್ಲ. ರಾಜ್ಯದ ಜನರು ಇವರ ಬಗ್ಗೆ ತೀರ್ಮಾನ ಮಾಡುತ್ತಾರೆಂದು ವಾಗ್ದಾಳಿ ನಡೆಸಿದರು.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!