ಸಿಎಂ ಬಸವರಾಜ ಬೊಮ್ಮಾಯಿಗೆ ಗೋವು- ಜೋಡೆತ್ತು ಕಾಣಿಕೆ, ಮಣ್ಣಿನ ಮಡಿಕೆ ಕೊಡುಗೆ, ರೈತ ಸಂಸ್ಕೃತಿ ಮೂಲಕ ಸಿಎಂಗೆ ಸ್ವಾಗತ
ವಿಜಯಪುರ: ಮಹತ್ವಾಕಾಂಕ್ಷಿ ಬೂದಿಹಾಳ ಪೀರಾಪುರ ಏತ ನೀರಾವರಿ ಹಂತ -1 ರ ಪೈಪ್ ವಿತರಣೆ ಜಾಲದ ಕಾಮಗಾರಿಯ ಶಂಕು ಸ್ಥಾಪನೆಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಗೆ ವಿನೂತನವಾಗಿ ಸ್ವಾಗತಿಸಲಾಗಿದೆ.
ತಾಳಿಕೋಟೆಯ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಆರಂಭದಲ್ಲೇ ಅಚ್ಚರಿ ಕಾದಿತ್ತು.
ಬಂಟನೂರ ಗ್ರಾಮದ ಹಲವು ರೈತರು ಗೋವು, ಜೋಡೆತ್ತು ಹಾಗೂ ಮಣ್ಣಿನ ಮಡಿಕೆ ನೀಡಿ ಸ್ವಾಗತಿಸಲಾಯಿತು.
ರೈತ ಸಂಸ್ಕೃತಿ ಬಿಂಬಿಸುವ ಮೂಲಕ ಕಾರ್ಯಕ್ರಮಕ್ಕೆ ವಿನೂತನ ಸ್ಪರ್ಶ ನೀಡಲಾಯಿತು. ಹಸಿರು ಶಾಲು ಹೊದ್ದ ರೈತರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಗೋವು ಮತ್ತು ಜೋಡೆತ್ತು ಕಾಣಿಕೆಯಾಗಿ ನೀಡುತ್ತಾ, ಈ ಭಾಗದ ನೀರಾವರಿ ಕಾಮಗಾರಿಗೆ ಚಾಲನೆ ನೀಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಗೋವು, ಎತ್ತುಗಳನ್ನು ಸಿಎಂ ಬೊಮ್ಮಾಯಿ ಯಲಗೂರು ಅಂಜನೇಯಗೆ ಅರ್ಪಿಸಿದರು. ಸಚಿವ ಗೋವಿಂದ ಕಾರಜೋಳ,
ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಎ.ಎಸ್. ಪಾಟೀಲ ನಡಹಳ್ಳಿ ಮತ್ತಿತರರು ಸಾಥ್ ನೀಡಿದರು.