ವಿಜಯಪುರ

ಅಲಿಯಾಬಾದ್ ಕೈಗಾರಿಕೆ ವಲಯದಲ್ಲಿ ಅವಘಡ, ನಾಲ್ವರ ರಕ್ಷಣೆ, ಡಿಸಿ ಭೂಬಾಲನ್ ಫಸ್ಟ್ ರಿಯಾಕ್ಷನ್ ಏನಿತ್ತು ಗೊತ್ತಾ?

ಸರಕಾರ ನ್ಯೂಸ್ ವಿಜಯಪುರ

ಮೆಕ್ಕೆಜೋಳ ತುಂಬಿದ ಬೃಹತ್ ಕಬ್ಬಿಣದ ತೊಟ್ಟಿ ಕುಸಿದು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ 10ಕ್ಕೂ ಅಧಿಕ ಕಾರ್ಮಿಕರ ಪೈಕಿ ನಾಲ್ವರನ್ನು ರಕ್ಷಿಸಲಾಗಿದ್ದು, ಇನ್ನೂ ಎಂಟು ಜನ ಇರಬಹುದೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಂದಾಜಿಸಿದ್ದಾರೆ.

ಅಲಿಯಾಬಾದ್ ಕೈಗಾರಿಕೆ ವಲಯದಲ್ಲಿ ಸೋಮವಾರ ಈ ಅವಘಡ ಸಂಭವಿಸಿದ್ದು, ಸತತ ನಾಲ್ಕೈದು ಗಂಟೆಯ ಚುರುಕಿನ ಕಾರ್ಯಾಚರಣೆಯ ಫಲವಾಗಿ ನಾಲ್ವರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಬದುಕಿಳಿದ ಆ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಕಾರ್ಯಾಚರಣೆ ಮಧ್ಯೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಅಲಿಯಾಬಾದ್ ಕೈಗಾರಿಕೆ ಪ್ರದೇಶ.
ಅಲಿಯಾಬಾದ್ ಕೈಗಾರಿಕೆ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆ.

ಈಗಾಗಲೇ ಕಲಬುರಗಿ ಹಾಗೂ ಬೆಳಗಾವಿಯಿಂದ ಎಸ್‌ಡಿಆರ್‌ಎಫ್ ತಂಡ ಬರುತ್ತಿದೆ. ಅವಶ್ಯಬಿದ್ದರೆ ಪುಣೆ ಹಾಗೂ ಹೈದ್ರಾಬಾದ್‌ನಿಂದ ಎನ್‌ಡಿಆರ್‌ಎಫ್ ತಂಡ ಕೂಡ ಕರೆಯಿಸಿಕೊಳ್ಳಲಾಗುತ್ತಿದೆ. ಅಲ್ಲಿವರೆಗೆ ಸುಮಾರು 5-6 ಗಂಟೆಯಾಗಲಿದೆ. ಅಲ್ಲಿಯವರೆಗೆ ಎಸ್‌ಡಿಆರ್‌ಎಫ್ ತಂಡದ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗುವುದು.

ಸಹಜವಾಗಿಯೇ ಉಸಿರುಗಟ್ಟುವ ವಾತಾವರಣ ಇದೆ. ನಮ್ಮ ವೈದ್ಯರು ಆಕ್ಸಿಜನ್ ಪೂರೈಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತಿತರ 100ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದರು.

ಎಸ್ ಪಿ ಋಷಿಕೇಶ ಸೋನಾವಣೆ, ಜಿಪಂ ಸಿಇಒ ರಾಹುಲ್ ಶಿಂಧೆ ಮತ್ತಿತರರಿದ್ದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ.)

error: Content is protected !!