ಸಾತ್ವಿಕ್ ಸಾವು ಗೆದ್ದ ಬೆನ್ನಲ್ಲೇ ದಾಖಲಾಯಿತು ಎಫ್ ಐಆರ್, ಆರೋಪಿ ಯಾರು ಗೊತ್ತಾ?
ಸರಕಾರ ನ್ಯೂಸ್ ಇಂಡಿ
ತೆರೆದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸಾವು ಗೆದ್ದು ಬಂದ ಒಂದೂವರೆ ವರ್ಷದ ಕಂದ ಸಾತ್ವಿಕ್ ಗುಣಮುಖವಾಗಿ ಜಿಲ್ಲಾಸ್ಪತ್ರೆಯಿಂದ ತವರಿಗೆ ಮರಳಿದ್ದಾನೆ. ಗ್ರಾಮದಲ್ಲಿ ಅದ್ದೂರಿ ಸ್ವಾಗತವೂ ಆಗಿದೆ. ಆದರೆ, ಇತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಲಾಗಿದೆ.
ಇಂಡಿ ಗ್ರಾಮೀಣ ಠಾಣೆಯಲ್ಲಿ ಏಪ್ರಿಲ್ 5ರಂದು ದೂರು ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರ್‌ವೆಲ್ ಏಜೆನ್ಸಿ ಹಾಗೂ ಮತ್ತಿತರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ರಿಗ್ ವಾಹನ ಕೆಎ-01, ಎಂಟಿ-6369 ಮತ್ತು ಸಪೋರ್ಟ್ ವಾಹನ ಕೆಎ-01, ಎಂಟಿ-7369ರ ಮ್ಯಾನೇಜರ್ ಹಾಗೂ ಮತ್ತಿತರರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಏ.3 ರಂದು ಲಚ್ಯಾಣದ ಶಂಕ್ರೆಪ್ಪ ಶಿವಯೋ ಗಿ. ಮುಜಗೊಂಡ ಇವರ ಜಮೀನಿನಲ್ಲಿ ಬೋರ್ ವೆಲ್ ಹಾಕಿದ್ದು, ನೀರು ಬರದಿದ್ದರಿಂದ ಅಷ್ಟಕ್ಕೆ ಬೋರ್ ವೆಲ್ ಬಂದ್ ಮಾಡಿ ಮುಂಜಾಗೃತ ಕ್ರಮವಾಗಿ ಕೇಸಿಂಗ್ ಪೈಪ್ ಅಳವಡಿಸಿ ಅದರಲ್ಲಿ ಸಣ್ಣ ಮಕ್ಕಳು ಹಾಗೂ ಯಾವುದೇ ಜೀವ ಹಾನಿಯಾಗದಂತೆ ಕೊಳವೆ ಬಾವಿಯ ಮುಚ್ಚಿ ಸುರಕ್ಷತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಮಾನವೀಯ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಹಾಗೇ ತೆರೆದು ಬಿಟ್ಟಿದ್ದು ಇದರಿಂದ ಏ.3 ರಂದು ಸಂಜೆ 5.30ರ ಸುಮಾರಿಗೆ ಸಾತ್ವಿಕ್ ಸತೀಶ ಮುಜಗೊಂಡ (18) ಈತನು ಆಟ ಆಡುತ್ತಾ ಹೋಗಿ ಆಕಸ್ಮಿಕವಾಗಿ ಬೋರ್ ವೆಲ್‌ನಲ್ಲಿ ತಲೆ ಕೆಳಗಾಗಿ ಬಿದ್ದಿದ್ದಾನೆ. ಈ ಘಟನೆ ಸಂಭವಿಸಲು ಬೋರ್ ಲ್ ಕೊರೆಯುವ ವಾಹನಗಳ ಮ್ಯಾನೇಜ್ ಹಾಗೂ ಇನ್ನೂ ಕೆಲವರ ನಿರ್ಲಕ್ಷ್ಯವೇ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)