ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ, ಅತ್ತೆಗೂ ಪೆಟ್ಟುಕೊಟ್ಟ ಅಳಿಯ, ಅಬ್ಬಬ್ಬಾ…ಏನಿದು ಭಯಾನಕ ಕೃತ್ಯ?
ಸರಕಾರ ನ್ಯೂಸ್ ಬಬಲೇಶ್ವರ
ಅನೈತಿಕ ಸಂಬಂಧ ಹಾಗೂ ಜಮೀನು ವ್ಯಾಜ್ಯ ಗಳು ಬಹುತೇಕ ಕೊಲೆ ಪ್ರಕರಣಗಳಲ್ಲಿಯೇ ಅಂತ್ಯವಾಗುತ್ತಿವೆ !
ಅಂತೆಯೇ ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮದಲ್ಲಿ ಮಹಿಳೆಯೋರ್ವಳ ಬರ್ಬರ ಹತ್ಯೆಯಾಗಿದ್ದು, ಇದಕ್ಕೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿದೆ.
ಗ್ರಾಮದ ಯಲ್ಲವ್ವ ಗಳವೆ ಎಂಬುವರ ಬರ್ಬರ ಹತ್ಯೆಯಾಗುದ್ದು ಆಕೆಯ ಪತಿ ಸಾಬುನೇ ಹತ್ಯೆ ಮಾಡಿದ್ದಾಗಿ ತಿಳಿದು ಬಂದಿದೆ.
ಜಗಳ ಬಿಡಿಸಲು ಬಂದಿದ್ದ ಅತ್ತೆ ಸೌರವ್ವ ಮೇಲೂ ಹಲ್ಲೆಗೈದಿದ್ದು ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಬಲೇಶ್ವರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ಮುಂದುವರಿದಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)