ಗಾಂಧಿ ಚೌಕ್‌ನಲ್ಲಿ ಮಂಟಪ ಹಾಕುತ್ತೇನೆಂದ ಸಂಸದ ಜಿಗಜಿಣಗಿ, ಚರ್ಚೆಗೆ ಬನ್ನಿ ಎಂದಿದ್ದು ಯಾರಿಗೆ? ಇಲ್ಲಿದೆ ನೋಡಿ ಡಿಟೇಲ್ಸ್
ವಿಜಯಪುರ: ರಾಜ್ಯ ರಾಜಕೀಯದಲ್ಲಿ ಕಮೀಷನ್ ವಿಚಾರ ತಾರಕಕ್ಕೇರಿದ್ದು ಇದೀಗ ಜಿಲ್ಲಾ ರಾಜಕಾರಣದಲ್ಲೂ ಆ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಕಮಿಷನ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರೊಬ್ಬರು ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ನೀಡಿದ ಹೇಳಿ
ಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಜಿಗಜಿಣಗಿ, ಯಾರು ಯಾರು ರೊಕ್ಕ ಹೊಡೆಯುತ್ತಾರೆಂಬುದು ನಮಗೆ ಗೊತ್ತಿಲ್ಲವಾ? ರೊಕ್ಕ ಮುಂದಿಟ್ಟಾಗ ‘ಏಯ್ ತೆಗಿಯೋ…’ಎಂದು ಹೇಳುವ ನೈತಿಕತೆ ಬೇಕು. ‘ಬಡಬಡ ಒದರಿಕೊಂಡು ತಿರುಗಾಡಿದರ ಗಂಡಸ್ತನ ಅಂತರೇನು? ಸುಮ್ಮನೆ ಬಿಡಿ ಅದೆಲ್ಲಾ ಯಾಕ ತೆಗೀತೀರಿ? ಎಂದು ಅಸಮಾಧಾನ ಹೊರಹಾಕಿದರು.
ತಮ್ಮ ಅಂಗಿ ಹೊಲಸು ನಾರುತ್ತಿದೆ. ಮತ್ತೊಬ್ಬರ ಅಂಗಿ ಮಗ್ಗೆ ಮಾತನಾಡಬಾರದು. ನನಗೆ ನೈತಿಕತೆ ಇದೆ. ಬೇಕಾದರೆ ಗಾಂಧಿ ಚೌಕ್‌ನಲ್ಲಿ ಬರಲಿ ಮಂಟಪ ಹೊಡೆದು ಹೇಳುತ್ತೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸವಾಲೆಸೆದರು.
ಎಲ್ಲವನ್ನೂ ಪಟ್ಟಿ ಮಾಡಿಟ್ಟುಕೊಂಡಿದ್ದೇನೆ. ಸಂದರ್ಭ ಬಂದಾಗ ಮಂಟಪ ಹೊಡೆದು ಅದನ್ನು ಹೇಳುತ್ತೇನೆಂದು ಪರೋಕ್ಷವಾಗಿ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು.