ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಭ್ರಮರಾಂಬಾ ಕಲ್ಯಾಣೋತ್ಸವ, ವಿಜಯಪುರದಲ್ಲಿ ಗಮನ ಸೆಳೆದ ಶೋಭಾಯಾತ್ರೆ
ವಿಜಯಪುರ: ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಭ್ರಮರಾಂಬಾ ಕಲ್ಯಾಣೋತ್ಸವದ ಧರ್ಮಪ್ರಚಾರದ ಅಂಗವಾಗಿ ವಿಜಯಪುರದಲ್ಲಿ ಹಮ್ಮಿಕೊಂಡ ಭವ್ಯ ಶೋಭಾಯಾತ್ರೆ ಗಮನ ಸೆಳೆಯಿತು.
ಬುಧವಾರ ಜೋರಾಪುರ ಪೇಠದ ಶ್ರೀ ಶಂಕರಲಿಂಗ ದೇವಸ್ಥಾನದಿಂದ ಆರಂಭಗೊಂಡ ಶೋಭಾಯಾತ್ರೆ ಶ್ರೀ ಸಿದ್ಧೇಶ್ವರ ದೇವಸ್ಥಾನದವರೆಗೆ ನಡೆಯಿತು.
ಸುಮಾರು 350ಕ್ಕೂ ಹೆಚ್ಚು ಮುತ್ತೈದೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸ್ವಾಮಿ ಅಮ್ಮನವರ ಆಲಯ ಉಪ ಪ್ರಧಾನ ಅರ್ಚಕ ಶ್ರೀ ವೀರಯ್ಯ, ಆಲಯ ವಿಭಾಗ ಸಹಾಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಹರಿದಾಸು, ಆಲಯ ಪರ್ಯವೇಕ್ಷಕ ಅಯ್ಯನ್ನ, ಶ್ರೀಶೈಲ ಪ್ರಭ ಉಪಸಂಪಾದಕ ಶ್ರೀ ಕೆ.ವಿ. ಸತ್ಯ ಬ್ರಹ್ಮಾಚಾರ್ಯ ಮತ್ತಿತರು ಭಾಗವಹಿಸಿದ್ದರು.