ಶೇರ್ ಮಾರ್ಕೆಟ್‌ಗೆ ದುಡ್ಡು ಹಾಕಲು ಹೋಗಿ ಮೋಸ, ಅನಾಮತ್ತಾಗಿ ಲಕ್ಷ ಲಕ್ಷ ಕಳೆದುಕೊಂಡ ಗೃಹಿಣಿ, ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ….
ಸರಕಾರ ನ್ಯೂಸ್ ವಿಜಯಪುರ
ಶೇರ್ ಮಾರ್ಕೆಟ್‌ಗೆ ದುಡ್ಡು ಹಾಕಲು ಬರದಿದ್ದಾಗ ಗೂಗಲ್ ನಲ್ಲಿ ಸರ್ಚ್ ಮಾಡಿ ಮಾಹಿತಿ ಪಡೆದುಕೊಳ್ಳುವಷ್ಟರಲ್ಲಿ ಬಂದ ಅನಾಮಧೇಯ ಮೊಬೈಲ್ ಕರೆಗೆ ಮೋಸ ಹೋದ ಗೃಹಿಣಿಯೋರ್ವಳು ಲಕ್ಷಾಂತರ ರೂಪಾಯಿ ಮೋಸ ಹೋಗಿದ್ದಾರೆ.
ವಿಜಯಪುರದ ರಾಜಕುಮಾರ ಲೇಔಟ್ ನಿವಾಸಿ ಲಕ್ಷಿ ಎಂಬುವರು ಮೋಸಕ್ಕೆ ಒಳಗಾಗಿದ್ದು ಬರೋಬ್ಬರಿ 491765 ರೂಪಾಯಿ ಕಳೆದುಕೊಂಡಿದ್ದಾರೆ.
ಮನೆಯಲ್ಲಿ ಕುಳಿತುಕೊಂಡು ಮೊಬೈಲ್‌ನಲ್ಲಿ ಅಪ್ಲಿಕೇಶನ್ (ಸಿಆರ್‌ಓಡಬ್ಲುಡಬ್ಲು)ವೊಂದನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಶೇರ್ ಮಾರ್ಕೆಟ್‌ಗೆ ದುಡ್ಡು ಹಾಕಲು ಬರದಿದ್ದಾಗ ಗೂಗಲ್ ಸರ್ಚ್ ಕೊಟ್ಟಿದ್ದಾರೆ. ಅಷ್ಟರಲ್ಲಿ ಅನಾಮಧೇಯ ಕರೆ ಬಂದಿದೆ. ಅಪ್ಲಿಕೇಶನ್‌ನ ಕಸ್ಟಮರ್ ಕೇರ್‌ನವರಿದ್ದು, ನಿಮ್ಮ ಸಮಸ್ಯೆ ಆನ್‌ಲೈನ್ ಮೂಲಕ ಬಗೆ ಹರಿಸುವುದಾಗಿ ತಿಳಿಸಿ ಅದಕ್ಕಾಗಿ ರಸ್ಟ್ ಡೆಸ್ಕ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದಾರೆ. ಆ ಪ್ರಕಾರ ಮೊಬೈಲ್‌ನಲ್ಲಿ ಅಪ್ಲಿಕೇಶನ್ ಡೌನ್‌ಲಡ್ ಮಾಡಿ ಓಪನ್ ಮಾಡಿ ಅದರ ಸ್ಕ್ರೀನ್ ಶಾಟ್ ಶೇರ್ ಮಾಡಲು ಹೇಳಿದ್ದಾರೆ. ಅಲ್ಲದೇ ಲಕ್ಷ್ಮಿ ಅವರ ಬ್ಯಾಂಕ್ ಅಪ್ಲಿಕೇಶನ್ ಓಪನ್ ಮಾಡಿ ಅದರಲ್ಲಿ ಖಾತೆ ನಂಬರ್ ಹಾಗೂ ಬ್ಯಾಲೆನ್ಸ್ ಚೆಕ್ ಮಾಡಲು ಹೇಳಿದ್ದಾರೆ. ಆ ಪ್ರಕಾರ ಮಾಡಲಾಗಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಎಗರಿಸಿದ್ದಾರೆ.
ಈ ವಿಷಯ ಲಕ್ಷ್ಮಿ ಎಟಿಎಂಗೆ ಹಣ ಡ್ರಾ ಮಾಡಲು ಹೋದಾಗ ಗಮನಕ್ಕೆ ಬಂದಿದೆ. ಕೂಡಲೇ ಬ್ಯಾಂಕ್ ಹೋಗಿ ವಿಚಾರಿಸಲಾಗಿ ಲಕ್ಷ್ಮಿ ಅವರ ಖಾತೆಯಿಂದ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ 47,87,690 ರೂ.ಲೋನ್ ಜಮೆ ಆಗಿದ್ದು, ನಂತರ ಖಾತೆಯಿಂದ ಹಂತ ಹಂತವಾಗಿ ಒಟ್ಟು 4,91,765 ರೂಪಾಯಿ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಹೀಗಾಗಿ ಲಕ್ಷ್ಮಿ ಸೈಬರ್ ಠಾಣೆಗೆ ದೂರು ನೀಡಿದ್ದು, ತನಿಖೆ ಚುರುಕುಗೊಂಡಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್‌ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)