ಭೀಮಾತೀರದಲ್ಲಿ ಕಂಟ್ರಿ ಪಿಸ್ತೂಲ್-ಜೀವಂತ ಗುಂಡು ವಶ…!
ಸರಕಾರ ನ್ಯೂಸ್ ವಿಜಯಪುರ
ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೇ ಕಂಟ್ರಿ ಪಿಸ್ತೂಲ್ ಇರಿಸಿಕೊಂಡು ತಿರುಗಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಒಂದು ಕಂಟ್ರಿ ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡು ವಶಕ್ಕೆ ಪಡೆದಿದ್ದಾರೆ.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಅನೀಲ್ ಊರ್ಫ್ ಸುಖದೇವ ಮಲ್ಲಪ್ಪ ಬಂಡಾರಿ (35)ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿ ಅನೀಲ್‌ನನ್ನು ಇಂಡಿ ರೈಲ್ವೆ ಸ್ಟೇಶನ್ ಹಾಗೂ ಅಹಿರಸಂಗ್ ಮಧ್ಯೆ ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಸ್ಟೀಲ್ ಬಾಡಿ ಹಾಗೂ ಚಾಕೊಲೇಟ್ ಬಣ್ಣದ ಹಿಡಕಿ ಹೊಂದಿದ ಮತ್ತು ಅದರಲ್ಲಿ ಸ್ಟೀಲ್ ಮ್ಯಾಗ್ಜಿನ್ ಇರುವ ಅಂದಾಜು 20 ಸಾವಿರ ರೂ.ಮೌಲ್ಯದ ಕಂಟ್ರಿ ಪಿಸ್ತೂಲ್ ಹಾಗೂ 500 ರೂ.ಮೌಲ್ಯದ ಎರಡು ಜೀವಂತ ಗುಂಡು ವಶಕ್ಕೆ ಪಡೆದಿದ್ದಾರೆ.
ಎಸ್‌ಪಿ ಎಚ್.ಡಿ.ಆನಂದಕುಮಾರ ನಿರ್ದೇಶನ, ಎಎಸ್‌ಪಿ ಶಂಕರ ಮಾರಿಹಾಳ ಅವರ ಮಾರ್ಗದರ್ಶನ ಹಾಗೂ ಡಿವೈಎಸ್‌ಪಿ ಚಂದ್ರಕಾಂತ ನಂದರಡ್ಡಿ ಮತ್ತು ಸಿಪಿಐ ರತನಕುಮಾರ ಜೀರಗಾಳ ಇವರ ಯೋಜನೆ ಪ್ರಕಾರ ಪಿಎಸ್‌ಐ ಸೋಮೇಶ ಗೆಜ್ಜಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಸಾಕ್ಷೃ ಸಮೇತ ವಶಕ್ಕೆ ಪಡೆದಿದೆ.
ತಂಡದಲ್ಲಿ ಎಸ್.ವೈ. ಜೇರಟಗಿ, ಆರ್.ಪಿ. ಗಡೇದ, ಎಂ.ಎಸ್.ಕೂಡಿಗನೂರ, ರವಿ ಕೋಟೆ, ಎಸ್.ಎಸ್. ತಳವಾರ ಮತ್ತು ಪುಂಡಲೀಕ ಬಿರಾದಾರ ಇದ್ದು, ಇವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.