ವಿಜಯಪುರ

ಎಸ್‌ಪಿ ಆನಂದಕುಮಾರ ದಿಟ್ಟ ಕ್ರಮ, ನಾಲ್ವರು ಅಪರಾಧಿಗಳಿಗೆ ಗಡಿಪಾರು, ಯಾರು ಆ ಅಪಾರಾಧಿಗಳು? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ…

ವಿಜಯಪುರ: ವಿವಿಧ ಅಪರಾಧಿ ಕೃತ್ಯಗಳಲ್ಲಿ ತೊಡಗಿ, ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂಥ, ಸಮಾಜದಲ್ಲಿ ಶಾಂತತೆ ಕದಡುವಂಥ ಚಟುವಟಿಕೆಯಲ್ಲಿ ಭಾಗಿಯಾಗಿರುವ ನಾಲ್ವರು ಅಪರಾಧಿಗಳನ್ನು ಗಡಿಪಾರು ಮಾಡಿ ಎಸ್‌ಪಿ ಎಚ್.ಡಿ. ಆನಂದಕುಮಾರ ಆದೇಶಿಸಿದ್ದಾರೆ.
ಮೇ 13ರಂದೇ ಇಂಥದ್ದೊಂದು ಆದೇಶ ಹೊರಡಿಸಲಾಗಿದೆ. ವಿಜಯಪುರ ಜಿಲ್ಲಾ ಪಂಚಾಯಿತಿ ಹಿಂಭಾಗದ ಫೂಜ್ ಆಮ್ ಕಾಲನಿ ನಿವಾಸಿ ವಕೀಲ ಸೈಯ್ಯದ ಆಸಿಫುಲ್ಲಾ ಸೈಯದ್ ಖಾದರಪಾಷಾ ಖಾದ್ರಿ (40), ರೈಲ್ವೆ ಸ್ಟೇಶನ್ ಬಳಿಯ ನಿವಾಸಿ ಭರತ ಊರ್ಫ್ ಗುಡ್ಯಾ ಸತ್ಯನಾರಾಯಣ ಅಗರವಾಲ (46), ನಿಡಗುಂದಿಯ ವೆಂಕಟೇಶ ಮಾರುತಿ ಬಂಡಿವಡ್ಡರ (38) ಹಾಗೂ ಮನಗೂಳಿ ಠಾಣಾ ವ್ಯಾಪ್ತಿಯ ಉಕ್ಕಲಿ ನಿವಾಸಿ ನಾಗಪ್ಪ ಟಾಕಪ್ಪ ನಾಟಿಕಾರ (46) ಇವರನ್ನು 2022 ಮೇ 10 ರಿಂದ 2023 ಮೇ 9ರವರೆಗೆ ಮೈಸೂರು ಜಿಲ್ಲೆಯ ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಈ ಅಪರಾಧಿಗಳ ಮೇಲೆ ಹಲವು ಪ್ರಕರಣಗಳಿದ್ದು ಸಾರ್ವಜನಿಕರಿಗೆ ಕಂಟಕಪ್ರಾಯವಾಗಿ ವರ್ತಿಸುತ್ತಿದ್ದರು. ಶಾಂತಿ ಸುವಸ್ಥೆ ಕಾಪಾಡುವುದು ಹಾಗೂ ಕಾನೂನು ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಗಡಿಪಾರು ಆದೇಶ ಹೊರಡಿಸಿದ್ದಾಗಿ ಎಸ್‌ಪಿ ಆನಂದಕುಮಾರ ತಿಳಿಸಿದ್ದಾರೆ.

error: Content is protected !!