ವಿಜಯಪುರ

ಲಿಂಬೆ ಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ಪರಿಕರ ವಿತರಣೆ, ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ಮಾಹಿತಿ

ಸರಕಾರ ನ್ಯೂಸ್ ವಿಜಯಪುರ

: ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ವತಿಯಿಂದ ಲಿಂಬೆ ಬೆಳೆಗಾರರಿಗೆ ಉಪಯುಕ್ತ ಪರಿಕರಗಳಾದ ಸಿಟ್ರಸ್ ಸ್ಪೇಶಲ್, ಪ್ಲಾಸ್ಟಿಕ್ ಕ್ರೇಟ್ಸ್ ಹಾಗೂ ಟಾರ್ಪಾಲಿನ್‌ಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ.

ಪರಿಕರಗಳನ್ನು ಪಡೆಯಲಿಚ್ಚಿಸುವ ಲಿಂಬೆ ಬೆಳೆಗಾರರು, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿ ಇಂಡಿ ಅಥವಾ ತಾಲೂಕಾ ತೋಟಗಾರಿಕಾ ಕಚೇರಿಯಿಂದ ನಿಗದಿತ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಫೋಟೋ, ಆಧಾರ್ ಕಾರ್ಡ್, ಖಾತೆ ಉತಾರೆ, ಲಿಂಬೆ ಬೆಳೆ ದೃಢೀಕರಣ ಪ್ರಮಾಣ ಪತ್ರ, ಚಾಲ್ತಿ ವರ್ಷದ ಆರ್‌ಟಿಸಿಯೊಂದಿಗೆ ಅರ್ಜಿ ಸಲ್ಲಿಸಿ, ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು.

ಮಾಹಿತಿಗಾಗಿ ಮೊಬೈಲ್ 9900930850ಕ್ಕೆ ಸಂಪರ್ಕಿಸಬಹುದೆಂದು ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!