ವಿಜಯಪುರಕ್ಕೆ ಬರಲಿದ್ದಾರೆ ಶಿಕ್ಷಣ ಸಚಿವ, ಮೂರು ದಿನಗಳ ಕಾಲ ವಾಸ್ತವ್ಯ, ಎಲ್ಲೆಲ್ಲಿ, ಏನೇನು ಕಾರ್ಯಕ್ರಮ? ಇಲ್ಲಿದೆ ನೋಡಿ ಡಿಟೇಲ್ಸ್
ವಿಜಯಪುರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ ಏ.10 ರಿಂದ ಮೂರು ದಿನಗಳ ಕಾಲ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.
ಏ.10ರಂದು ಕಲಬುರಗಿಯಿಂದ ಸಿಂದಗಿ ರಸ್ತೆ ಮೂಲಕ ಜಿಲ್ಲೆಗೆ ಆಗಮಿಸಿ 11.30ಕ್ಕೆ ಸಿಂದಗಿಯ ಪಿಇಎಸ್ ಕಾಲೇಜ್‌ನಲ್ಲಿ ನಡೆಯಲಿರುವ ಬಿ.ಪಿ. ಕರ್ಜಗಿ ಅವರ ಅಭಿನಂದನ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 3.30 ಕ್ಕೆ ಜಿ.ಪಿ. ಪೋರ್ವಾಲ್ ಕಾಲೇಜಿನಲ್ಲಿ ನಡೆಯಲಿರುವ ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 4.30ಕ್ಕೆ ಮಾಂಗಲ್ಯ ಭವನದಲ್ಲಿ ನಡೆಯಲಿರುವ ಪಿ.ಯು. ಪ್ರಾಚಾರ್ಯರ ಎನ್‌ಇಪಿ ಕಾರ್ಯಾಗಾರದಲ್ಲಿ ಭಾಗವಹಿಸುವರು.
ಸಂಜೆ 5.30 ಕ್ಕೆ ಸಿಂದಗಿಯಿಂದ (ರಸ್ತೆ ಮೂಲಕ) ಹೊರಟು ಸಾಯಂಕಾಲ 6.30ಕ್ಕೆ ಆಲಮಟ್ಟಿ ತಲುಪಿ, ಅಲ್ಲಿಯೇ ವಾಸ್ತವ್ಯ ಮಾಡುವರು. ಏ. 11 ರಂದು ಬೆಳಗ್ಗೆ 6.30 ರಿಂದ ಸಂಜೆ 6ರವರೆಗೆ ವಿವಿಧ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಏ. 12ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1ರವರೆಗೆ ಕೆಬಿಜೆಎನ್‌ಎಲ್ ಸಮ್ಮೇಳನಾ ಸಭಾಂಗಣದಲ್ಲಿ ನಡೆಯಲಿರುವ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು.
ಮಧ್ಯಾಹ್ನ 2ಕ್ಕೆ ಜಿಲ್ಲೆಯ ಮುದ್ದೇಬಿಹಾಳ, ಬಸವನಬಾಗೇವಾಡಿ ತಾಲೂಕುಗಳ ಎನ್‌ಇಪಿ ಕಾರ್ಯಾಗಾರದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 3.30ಕ್ಕೆ ಆಲಮಟ್ಟಿಗೆ ರಸ್ತೆ ಮೂಲಕ ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರ ಆಪ್ತದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.