ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ, ರೇಣುಕಾಚಾರ್ಯ ಬಂಧನಕ್ಕೆ ಎಂಎಲ್‌ಸಿ ಪ್ರಕಾಶ ರಾಠೋಡ ಆಗ್ರಹ
ವಿಜಯಪುರ: ಸರ್ಕಾರದ ಭಾಗವಾಗಿದ್ದುಕೊಂಡು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ರೇಣುಕಾಚಾರ್ಯನನ್ನು ಕೂಡಲೇ ಬಂಧಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಆಗ್ರಹಿಸಿದ್ದಾರೆ.
ಸರ್ಕಾರ ಕೂಡಲೇ ರೇಣುಕಾಚಾರ್ಯನನ್ನು ಬಂಧಿಸಬೇಕು. ಇದೊಂದು ಸರ್ಕಾರಕ್ಕೆ ಕಪ್ಪು ಚುಕ್ಕೆ. ನಾಚಿಕೆಗೇಡಿನ ಸಂಗತಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸರ್ಕಾರದ ಪ್ರಮುಖ ಸ್ಥಾನದಲ್ಲಿರುವ ರೇಣುಕಾಚಾರ್ಯ ಸಂವಿಧಾನ ಬಾಹಿರ ಕೃತ್ಯ ಎಸಗಿರುವುದು ನಾಚಿಕೆಗೇಡು. ಅವರ ಕುಟುಂಬದವರು ಸಹ ಈ ಪ್ರಮಾಣ ಪತ್ರ ಪಡೆದಿದ್ದಾರೆಂದರೆ ಅದೊಂದು ಸಂವಿಧಾನ ವಿರೋಧಿ ಕೆಲಸ. ಹೀಗಾಗಿ ಕೂಡಲೇ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ರೇಣುಕಾಚಾರ್ಯಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಸರ್ಕಾರ ಸಹ ಅವರು ಪಡೆದಿರುವ ಸೌಲಭ್ಯ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.