ಯುವಕನಿಗೆ ಚಪ್ಪಲಿ ಸೇವೆ ಮಾಡಿದ ಮಹಿಳೆ, ಅಷ್ಟಕ್ಕೂ ಆತ ಮಾಡಿದ್ದೇನು ಗೊತ್ತಾ?
ಸರಕಾರ ನ್ಯೂಸ್ ವಿಜಯಪುರ
ಮಹಿಳೆಯೋರ್ವಳು ಯುವಕನಿಗೆ ಚಪ್ಪಲಿ ಸೇವೆ ಮಾಡಿರುವ ವಿಡಿಯೋ ಸಕತ್ ವೈರಲ್ ಆಗುತ್ತಿದೆ !
ವಿಜಯಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ ಎನ್ನಲಾದ ಘಟನೆ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿವೆ.
ಪರಸ್ಥಳಕ್ಕೆ ತೆರಳಲೆಂದು ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಯುವಕ ಕಣ್ಣು ಹೊಡೆದು ತನ್ನೊಂದಿಗೆ ಬರುವಂತೆ ಸನ್ನೆ ಮಾಡಿದ್ದು, ಇದರಿಂದ ಆಕ್ರೋಶಗೊಂಡ ಮಹಿಳೆ ಚಪ್ಪಲಿ ತೆಗೆದು ಬಾರಿಸಿದ್ದಾಳೆಂದು ತಿಳಿದು ಬಂದಿದೆ.
ಅಂದಹಾಗೆ ಮಹಿಳೆ ಮತ್ತು ಯುವಕನ ಹೆಸರು ತಿಳಿದು ಬಂದಿಲ್ಲ. ಘಟನೆ ನಡೆಯುತ್ತಿದ್ದಂತೆ ಯುವಕ ಕಾಲ್ಕಿತ್ತಿದ್ದಾನೆ. ಸಾರ್ವಜನಿಕರು ಬೈಯ್ದು ಕಳುಹಿಸಿದ್ದಾರೆ.