ನಮ್ಮ ವಿಜಯಪುರ

ಸಿನಿಮೀಯ ರೀತಿ ಪಿಸ್ತೂಲ್ ತೋರಿಸಿ ಆರೋಪಿ ಬಂಧನ, ಅಷ್ಟಕ್ಕೂ ಈ ಆರೋಪಿ ಯಾರು? ಏನಿದು ಕೇಸ್?

ಸರಕಾರ ‌ನ್ಯೂಸ್ ವಿಜಯಪುರ

ಸಿನಿಮೀಯ ರೀತಿಯಲ್ಲಿ ಪಿಸ್ತೂಲ್ ತೋರಿಸಿ ಆರೋಪಿಯನ್ನು ಬಂಧಿಸಿದ ಘಟನೆ ವಿಜಯಪುರದ ಹೃದಯಭಾಗದಲ್ಲಿ ನಡೆದಿದೆ.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಸಂಜೆ ಇಂಥದ್ದೊಂದು ಘಟನೆ ನಡೆದಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಆರೋಪಿ ಅವಿನಾಶ್ ಮಚ್ಚಾಳೆ ಈತನನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ತಾಮ್ರದ ತಂತಿ ಕದ್ದ ಪ್ರಕರಣದಲ್ಲಿ ಆರೋಪಿಯಾಗಿರುವ ಈತ ವಿಜಯಪುರದಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿರುವ ಮಾಹಿತಿ ಆಧರಿಸಿ ಹುಬ್ಬಳ್ಳಿ ಗ್ರಾಮೀಣ
ಪೊಲೀಸರು ಆಗಮಿಸಿದ್ದರು.

ಅವಿನಾಶ ನನ್ನು ಕರೆದೊಯ್ಯಬೇಕಾದರೆ ತೀವ್ರ ಹರಸಾಹಸ ಪಡಬೇಕಾಯಿತು. ಮುಫ್ತಿಯಲ್ಲಿದ್ದ ಪೊಲೀಸರು ಬಂಧನಕ್ಕೆ ಮುಂದಾಗುತ್ತಿದ್ದಂತೆ ಆತನ ಕುಟುಂಬದ ಮಹಿಳೆಯರಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಹಾಗೂ ಗಲಾಟೆ ನಡೆಯಿತು. ಆಗ ಪಿಸ್ತೂಲ್ ತೋರಿಸಿ ಕರೆದೊಯ್ಯಬೇಕಾಯಿತು.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್ಐ ಹೊನ್ನಪ್ಪನವರ
ಆರೋಪಿಯನ್ನು ಬಂಧಿಸಿ ವಿಜಯಪುರ ನಗರದ ಗೋಲಗುಂಬಜ್ ಪೊಲೀಸ್ ಠಾಣೆಗೆ ಕರೆದೊಯ್ದು
ತಮ್ಮ ಹೆಸರು, ವಿಳಾಸ ಹಾಗೂ ಇತರೆ ಮಾಹಿತಿ ನೀಡಿ
ಬಳಿಕ ಆರೋಪಿ ಅವಿನಾಶನನ್ನು ಹುಬ್ಬಳ್ಳಿಗೆ ಕರೆಯ್ದೊಯ್ದರು.

error: Content is protected !!