ಭೀಮಾತೀರದಲ್ಲಿ ಅಚ್ಚರಿಯ ವಿದ್ಯಮಾನ, ಬಾನಿಂದ ಹಾರಿ ಬಂದ ಪ್ಯಾರಾಚೂಟ್ ಮಾದರಿ ಉಪಕರಣ, ಏನದು?
ಸರಕಾರ ನ್ಯೂಸ್ ವಿಜಯಪುರ
ಭೀಮಾತೀರದ ಚಡಚಣ ಬಳಿಯ ಮರಗೂರ ಬಳಿ ಅಪರೂಪದ ಉಪಕರಣವೊಂದು ಪತ್ತೆಯಾಗಿದ್ದು, ಜನ ಕುತೂಹಲದಿಂದ ನೋಡುತ್ತಿದ್ದಾರೆ !
ಆಕಾಶದಿಂದ ಹಾರಿ ಬಂದ ಈ ಉಪಕರಣದಿಂದ ಕೆಲ ಕಾಲ ಜನ ಆತಂಕಕ್ಕೆ ಈಡಾಗಿದ್ದರು. ಬಳಿಕ ಅಧಿಕಾರಿಗಳು ಸ್ಥಳಕ್ಕೆ ದೌಢಾಯಿಸಿ ಅದರ ಮಾಹಿತಿ ಕಲೆ ಹಾಕಿ ಜನರ ಆತಂಕ ನಿವಾರಿಸಿದ್ದಾರೆ. ಅಷ್ಟಕ್ಕೂ ಆ ಉಪಕರಣ ಯಾವುದು? ಹೇಗೆ ಬಂತು? ಏನದರ ವಿಶೇಷ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿನ ಹೈದರಾಬಾದ್ ಮೂಲದ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್) ಹವಾಮಾನ ಹಾಗೂ ವಾತಾವರಣ ಅಧ್ಯಯನಕ್ಕಾಗಿ ಉಡಾವಣೆ ಮಾಡಿದ್ದ *ಹವಾಮಾನ ಅಧ್ಯಯನಾಶೀಲ ವೈಜ್ಞಾನಿಕ ಉಪಕರಣ* ( ಪೇಲೋಡ್ ) ವೊಂದು ಪ್ಯಾರಾಚೂಟ್ ನ ನೆರವಿನಿಂದ ಚಡಚಣ ತಾಲೂಕಿನ ಗ್ರಾಮವೊಂದರ ಜಮೀನಿನಲ್ಲಿ ಬಂದಿಳಿದಿದೆ.
ಜಿಲ್ಲಾಡಳಿತವು ಸಂಬಂಧಿತ ಸಂಸ್ಥೆಯನ್ನು ಸಂಪರ್ಕಿಸಿ ಈಗಾಗಲೇ ಮಾಹಿತಿ ಒದಗಿಸಿದೆ.
ಸಂಸ್ಥೆಯ ಅಧಿಕಾರಿಗಳ ತಂಡ ಸದ್ಯದಲ್ಲಿಯೇ ವಿಜಯಪುರಕ್ಕೆ ಆಗಮಿಸಲಿದೆ. ಅಲ್ಲದೆ, ಜಮೀನಿನಲ್ಲಿ ಬಿದ್ದಿರುವ ಪ್ಯಾರಾಚ್ಯೂಟ್ ಹಾಗೂ ಪೆಲೋಡ್, ಅದಕ್ಕೆ ಸಬಂಧಿಸಿದ ಸಾಧನಾಸಲಕರಣೆಗಳನ್ನು ತೆಗೆದುಕೊಂಡು ಹೋಗಲಿದೆ.
ಆದಕಾರಣ, ಈ ಬಗ್ಗೆ ಯಾರೂ ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.