ವಿಜಯಪುರ

ಕೋರ್ಟ್ ಎದುರಲ್ಲೇ ರಾಡ್ ನಿಂದ ಹಲ್ಲೆ, ಸ್ಥಳೀಯರ ರಕ್ಷಣೆಯಿಂದ ವ್ಯಕ್ತಿ ಬಚಾವ್…!

ಸರಕಾರ ನ್ಯೂಸ್ ಮುದ್ದೇಬಿಹಾಳ

ನ್ಯಾಯಾಲಯದ ಎದುರಲ್ಲಿಯೇ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಮುದ್ದೇಬಿಹಾಳ ಪಟ್ಟಣದ ನ್ಯಾಯಾಲಯದ ಮುಂದೆ ಮಂಗಳವಾರ ಈ ಘಟನೆ ನಡೆದಿದೆ.

ನಾಲ್ವರು ವ್ಯಕ್ತಿಗಳು ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳೀಯ ಸಾರ್ವಜನಿಕರು ಹಾಗೂ ವಕೀಲರು ಬಿಡಿಸಿಕೊಳ್ಳಲು ಹೋಗಿದ್ದು, ಅವರಲ್ಲಿ ಕೆಲವರಿಗೆ ಗಾಯಗಳಾಗಿವೆ.

ಸಿಡಿಲು ಬಡಿದು ಆಕಳ ಸಾವು, ಮುಂಗಾರು ಪೂರ್ವ ಮಳೆಗೆ ಹಾನಿ !!!

ಹಲ್ಲೆ ಮಾಡಿದ ನಾಲ್ವರನ್ನು ಹಿಡಿಯ ಹೋದಾಗ ಸ್ಥಳದಲ್ಲಿಂದ ಹಲ್ಲೆಕೋರರು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ಆತನನ್ನು ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿವರ ಕಲೆ ಹಾಕಲಾಗುತ್ತಿದೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!