ಬಾಲಕಿ ಕಾಣೆ; ಫೋಟೊ ನೋಡಿ….ಮಾಹಿತಿ ಸಿಕ್ಕರೆ ಕರೆ ಮಾಡಿ
ಸರಕಾರ್ ನ್ಯೂಸ್ ವಿಜಯಪುರ
ದೇವರ ನಾವದಗಿ (ಹಾಲಿ ವಸ್ತಿ ದೇವರಹಿಪ್ಪರಗಿ) ನಿವಾಸಿ ಅಕ್ಷತಾ ಅಶೋಕ ಕಂಬಾರ (19) ಕಾಣೆಯಾಗಿದ್ದು, ಈ ಬಗ್ಗೆ ಪಾಲಕರು ದೇವರ ಹಿಪ್ಪರಗಿ ಠಾಣೆಗೆ ದೂರು ನೀಡಿದ್ದಾರೆ.
ದುಂಡು ಮುಖ, ಮೊಂಡ ಮೂಗು, ಮೈಯಿಂದ ಸಾಧಾರಣ, ಸಾದ ಗೆಂಪು ಮೈ ಬಣ್ಣ, ಅಂದಾಜು 4.6 ಅಡಿ ಎತ್ತರ ಇರುವ ಅಕ್ಷತಾ ಪತ್ತೆಯಾದರೆ ಪಾಲಕರ ಗಮನಕ್ಕೆ ತರುವಂತೆ ಮನವಿ ಮಾಡಲಾಗಿದೆ.
ಕನ್ನಡ ಭಾಷೆ ಮಾತನಾಡುವ ಅಕ್ಷತಾ ಮನೆಯಿಂದ ಹೊರಡುವಾಗ ನೇರಳೆ ಬಣ್ಣದ ಚೂಡಿದಾರ ಟಾಪ್, ಕಪ್ಪು ಬಣ್ಣದ ಲೆಗಿನ್ಸ್ ಧರಿಸಿದ್ದಳು. ಬಾಲಕಿ ಪತ್ತೆಯಾದಲ್ಲಿ ಸಾರ್ವಜನಿಕರು ದೇವರ ಹಿಪ್ಪರಗಿ ಪಿಎಸ್‌ಐ ದೂ.08424-283033, ಮೊ. 9480804259, ಸಿಪಿಐ ಸಿಂದಗಿ ದೂ. 08488-222333, ಡಿವೈಎಸ್‌ಪಿ ಇಂಡಿ ದೂ. 08359-225022 ಅಥವಾ ವಿಜಯಪುರ ಪೊಲೀಸ್ ಕಂಟ್ರೋಲ್ ರೂಮ್ ದೂ.: 08352-250844ಕ್ಕೆ ಮಾಹಿತಿ ನೀಡುವಂತೆ ದೇವರಹಿಪ್ಪರಗಿ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.