ವಿಜಯಪುರ

ಮೂರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಮನಕಲಕುವ ಘಟನೆಗೆ ಕಾರಣವೇನು?

ಸರಕಾರ ನ್ಯೂಸ್ ತಿಕೋಟಾ

ಕೌಟುಂಬಿಕ ಕಲಹ ಹಿನ್ನಲೆ ಮೂರು ಮಕ್ಕಳೊಂದಿಗೆ ನೀರಿನ ಸಂಪ್ ನಲ್ಲಿ ಹಾರಿ‌ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ.

ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾ ಗೀತಾ ರಾಮು ಚೌವ್ಹಾಣ (32), ಸೃಷ್ಟಿ (6) ಸಮರ್ಥ (4)
ಕಿಶನ್ (3) ಮೃತರಾದವರು.

ನಿನ್ನೆ ರಾತ್ರಿ ಪತಿಯೊಂದಿಗೆ ಜಗಳ ಮಾಡಿದ್ದ ಗೀತಾ
ಪತಿ ರಾಮು ಮಲಗಿದ್ದ ವೇಳೆ ಮೂವರು‌ ಮಕ್ಕಳನ್ನು ನೀರಿನ‌ ಸಂಪ್ ಗೆ ಎಸೆದ ಪಾಪಿ ತಾಯಿ
ಬಳಿಕ ಸಂಪ್ ನಲ್ಲಿ ತಾನೂ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ಥಳಕ್ಕೆ ತಿಕೋಟಾ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

(ಕ್ಷಣ ಕ್ಷಣ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!