ಇಂಡಿಯಲ್ಲಿ ಲಾರಿ-ಬೈಕ್ ಡಿಕ್ಕಿ; ಬೈಕ್ ಸವಾರನ ಎರಡೂ ಕಾಲು ಕಟ್ !
ವಿಜಯಪುರ: ಬೈಕ್ ಮತ್ತು ಲಾರಿ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರನ ಎರಡೂ ಕಾಲು ಕಟ್ ಆದ ಭೀಕರ ಘಟನೆ ನಡೆದಿದೆ.
ಭಾನುವಾರ ಇಂಡಿ ಪಟ್ಟಣದಲ್ಲಿ ಬೈಕ್ ಮೇಲೆ ಹೊರಟಿದ್ದಾಗ ಎದುರಿನಿಂದ ಬಂದ ಲಾರಿ ರಭಸವಾಗಿ ಡಿಕ್ಕಿ ಹೊಡೆದಿದೆ. ಬೈಕ್ ಉರುಳಿ ಬಿದ್ದಿದ್ದು ಸ್ವಲ್ಪ ದೂರ ಎಳೆದು ಕೊಂಡು ಹೋಗಿದೆ. ಗಾಯಾಳು ಬೈಕ್ ಸವಾರನನ್ನು ರೋಡಗಿ ನಿವಾಸಿ ಹುಚ್ಚಪ್ಪ ಎನ್ನಲಾಗುತ್ತಿದೆ. ಘಟನೆ ಬಳಿ ಲಾರಿ ಚಾಲಕ ಪರಾರಿಯಾಗಿದ್ದಾನೆ. ಇಂಡಿ ಶಹರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.