ವಿಜಯಪುರ

ಶಾಸಕ ಯತ್ನಾಳ ಹೊಸ ಬಾಂಬ್‌, ಸಂತೋಷ ಆತ್ಮಹತ್ಯೆ ಪ್ರಕರಣ, ಮಹಾನಾಯಕ-ಯುವ ನಾಯಕರ ಕೈವಾಡ…!

ವಿಜಯಪುರ: ಸಂತೋಷ ಆತ್ಮ ಹತ್ಯೆ ಪ್ರಕರಣ ಹಾಗೂ ಜಾರಕಿ ಹೊಳಿ ಸಿಡಿ ಪ್ರಕರಣದಲ್ಲಿ “ಮಹಾನಾಯಕʼನ ಕೈವಾಡವಿದೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆ ಸತ್ಯ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿನ ಕನಕದಾಸ ಬಡಾವಣೆಯಲ್ಲಿ ಯುವ ಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ 3.25 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಈಜುಗೊಳ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಿಜೆಪಿಯಲ್ಲಿರುವ ಓರ್ವ ಯುವ ನಾಯಕ ಹಾಗೂ ಕಾಂಗ್ರೆಸ್‌‌ನ ಮಹಾನಾಯಕ ಸೇರಿ ಈ ಕುತಂತ್ರ ಹೆಣದಿದ್ದಾರೆ ಎಂದು ಕಿಡಿಕಾರಿದರು.

ಅಲ್ಲದೇ, ಬಿಜೆಪಿಯಲ್ಲೂ ಒಂದು ಟೀಮ್ ಇದೆ. ಕಾಂಗ್ರೆಸ್ ನಲ್ಲೂ ಒಂದು ಟೀಮ್ ಇದೆ. ಮಹಾಕಳ್ಳ ನಮ್ಮಲ್ಲಿರುವ ಕಳ್ಳ ಸೇರಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ. ರಾಜ್ಯದಲ್ಲಿ ಎರಡು ಸಿಡಿ ಕಾರ್ಖಾನೆಗಳು ಇದಾವೆ. ಅವರಿಬ್ಬರು ಸೇರಿ ಇದನ್ನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

error: Content is protected !!