ವಿಜಯಪುರ

ಈಜು ಹೊಡೆದು ಈಜುಗೊಳ ಉದ್ಘಾಟಿಸಿದ ಶಾಸಕ ಯತ್ನಾಳ…!

ವಿಜಯಪುರ: ಗುಮ್ಮಟ ನಗರಿಯ ಬಹುದಿನದ ಬೇಡಿಕೆಯಾದ ಒಳಾಂಗಣ ಈಜುಗೊಳವನ್ನು ಶುಕ್ರವಾರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಜು ಹೊಡೆಯುವ ಮೂಲಕ ಉದ್ಘಾಟಿಸಿದರು.

ಇಲ್ಲಿನ ಕನಕದಾಸ ಬಡಾವಣೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 3.25 ಕೋಟಿ ರೂ.ವೆಚ್ಚದಲ್ಲಿ ಈಜುಗೊಳ ನಿರ್ಮಿಸಲಾಗಿದೆ.

ಪ್ರಸಕ್ತ ಬೇಸಿಗೆಯಲ್ಲಿ ಸಾಮಾನ್ಯ ಜನರಿಗೂ ಈಜುಗೊಳದ ಅನುಕೂಲತೆಯಾಗಬೇಕು ಮತ್ತು ಈಜುಪಟುಗಳಿಗೆ ತರಬೇತಿಗೆ ಅನುಕೂಲಕ ಕಲ್ಪಿಸುವ ಉದ್ದೇಶದಿಂದ ಈಜುಗೊಳ ನಿರ್ಮಿಸಲಾಗಿದ್ದು ಇಂದಿನಿಂದಲೇ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದೂ ತಿಳಿಸಿದರು.

ಈ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೂಡ ಈಜು ಹೊಡೆದು ಸಂಭ್ರಮಿಸಿದರು.

error: Content is protected !!