ಕೆ.ಎಸ್. ಈಶ್ವರ ಬಂಧನಕ್ಕೆ ಒತ್ತಾಯ, ಸತೀಶ ಜಾರಕಿಹೊಳಿ ನೇತೃತ್ವ ಕಾಂಗ್ರೆಸ್ ಪ್ರತಿಭಟನೆ
ವಿಜಯಪುರ: ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಲು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈಶ್ವರ ಅವರನ್ನು ಕೂಡಲೇ ಬಂಧಿಸಿ ಎಂದು ಒತ್ತಾಯಿಸಿದರು.
ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಧಾರ್ಮಿಕ ವಿಷಯ ಬಂದಾಗ ಸಮಾಧಾನದಿಂದ ಇರಬೇಕು. ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಧಾರ್ಮಿಕ ವಿಚಾರಗಳಲ್ಲಿ ಸಾಕಷ್ಟು ಫೇಕ್ ಇರುತ್ತವೆ. ಅದಕ್ಕಾಗಿಎಲ್ಲ ಜಾತಿ ಧರ್ಮದವರು ಕೂಲಂಕಷವಾಗಿ ವಿಚಾರ ಮಾಡಿ ಪ್ರತಿಕ್ರಿಯೆ ನೀಡಬೇಕು ಎಂದರು.
ಇನ್ನು ಹುಬ್ಬಳ್ಳಿ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡ ರೇಣುಕಾಚಾರ್ಯ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಜಾರಕಿಹೊಳಿ, ರೇಣುಕಾಚಾರ್ಯಗೆ ಮಾಡೋಕೆ ಕೆಲಸ ಇಲ್ಲ. ಫೇಕ್ ಮಾಡೋರು ಬಿಜೆಪಿ ಐಟಿ ಸೆಲ್ ನವರು ಎಂದು ಆರೋಪಿಸಿದರು. ಇನ್ನು ಯಾರು ತಕ್ಷಣವೇ ರಿಯಾಕ್ಟ್ ಮಾಡಬಾರದು, ಸತ್ಯಾಂಶ ಕಂಡು ಹಿಡಿಯಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್, ಜಿಲ್ಲಾಧ್ಯಕ್ಷ ರಾಜು ಆಲಗೂರ, ಕೈ ಮುಖಂಡ ಅಬ್ದುಲ್ ಹಮ್ಮಿದ್ ಮುಶ್ರಿಫ್, ಮಹಾದೇವಿ ಗೋಕಾಕ, ವಿದ್ಯಾರಾಣಿ ತುಂಗಳ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.