ವಿಜಯಪುರ

ಉಕ್ರೇನ್ ಯುದ್ಧ ಭೂಮಿಯಿಂದ ತವರಿಗೆ ವಾಪಸ್, ವಿಜಯಪುರಕ್ಕೆ ಬಂದ ವಿದ್ಯಾರ್ಥಿಗಳಿಗೆ ಸಂಭ್ರಮದ ಸ್ವಾಗತ…!

ವಿಜಯಪುರ: ಯುದ್ಧ ಭೂಮಿ ಉಕ್ರೇನ್‌ನಿಂದ ವಿಜಯಪುರದ ವಿದ್ಯಾರ್ಥಿಗಳು ಸುರಕ್ಷಿತವಾಗಿ ತವರು ಸೇರಿದ್ದಾರೆ.
ವಿಜಯಪುರ ನಗರದ ನಿವಾಸಿಗಳಾದ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಹಾಗೂ ವಿವಿಧಾ ಪ್ರಭು ಮಲ್ಲಿಕಾರ್ಜುನ ಮಠ ಸೋಮವಾರ ತವರಿಗೆ ಮರಳಿದರು.
ಮಕ್ಕಳನ್ನು ಕರೆತರಲು ಪಾಲಕರು ಬೆಂಗಳೂರುವರೆಗೆ ಹೋಗಿದ್ದರು. ವಿಮಾನದಿಂದ ಇಳಿಯುತ್ತಿದ್ದಂತೆ ಅವರನ್ನು ಭಾವುಕತೆಯಿಂದ, ಆತ್ಮೀಯತೆಯಿಂದ ಬರಮಾಡಿಕೊಂಡರು. ಮನೆಗೆ ಬರುತ್ತಿದ್ದಂತೆ ಆರತಿ ಬೆಳಗಿ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು. ವೈದ್ಯಕೀಯ ಶಿಕ್ಷಣ ಪಡೆಯಲು ಹೋಗಿದ್ದ ವಿದ್ಯಾರ್ಥಿಗಳು ಕುಟುಂಬಸ್ಥರ ಕಾಲಿಗೆ ಎರಗಿ ಆಶೀರ್ವಾದ ಪಡೆದರು.
ವಿಜಯಪುರದ ಒಟ್ಟು 16 ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳಿದ್ದರು. ಆ ಪೈಕಿ 10 ಜನ ಭಾರತ ತಲುಪಿದ್ದಾರೆ. ಇಬ್ಬರು ನಿನ್ನೆಯಷ್ಟೇ ಬುಡೆಪೆಸ್ಟ್ ವಿಮಾನ ನಿಲ್ದಾಣದಲ್ಲಿದ್ದರು. 4 ವಿದ್ಯಾರ್ಥಿಗಳು ರೊಮೇನಿಯಾ ಗಡಿ ತಲುಪಿದ್ದಾಗಿ ಜಿಲ್ಲಾಡಳಿತ ಮಾಹಿತಿ ನೀಡಿತ್ತು. ಇದೀಗ ಕೆಲವರು ಕುಟುಂಬ ಸೇರಿದ್ದು ಇನ್ನೂ ಕೆಲವರು ಸುರಕ್ಷಿತವಾಗಿ ಆಗಮಿಸುತ್ತಿದ್ದಾರೆಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

error: Content is protected !!