ಗ್ರಹಣ ವೇಳೆ ಸಿದ್ಧಿಗಾಗಿ ವಿಶಿಷ್ಟ ಪೂಜೆ, ಆಳೆತ್ತರದ ಗುಂಡಿಯಲ್ಲಿ ಕುಳಿತು ತಪಸ್ಸು
ಸರಕಾರ್ ನ್ಯೂಸ್ ಸಿಂದಗಿ
ಆಧ್ಯಾತ್ಮಿಕ ಸಾಧಕರಿಗೆ ಅಮಾವಾಸ್ಯೆ, ಗ್ರಹಣ ಸಮಯಗಳು ಅತ್ಯಂತ ಮಹತ್ವದ್ದಾಗಿದ್ದು, ಅಂತೆಯೇ ಇಲ್ಲೋರ್ವ ಸ್ವಾಮೀಜಿ ಗ್ರಹಣ ಸಮಯದಲ್ಲಿ ಆಳೆತ್ತರದ ಗುಂಡಿ ತೋಡಿ ಅದರಲ್ಲಿ ನೀರು ತುಂಬಿ ತಪಸ್ಸಿಗೆ ಕುಳಿತಿದ್ದಾರೆ.
ದೇವರಹಿಪ್ಪರಗಿ ಪಟ್ಟಣದ ಪರದೇಶ ಮಠದ ಶಿವಯೋಗಿ ಶ್ರೀಗಳು ಗ್ರಹಣ ಸಮಯದಲ್ಲಿ ಆಳೆತ್ತರದ ಗುಂಡಿ ತೋಡಿ ಗುಂಡಿಯಲ್ಲಿ ನೀರು ತುಂಬಿ ಅದರಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿ ಸಿಗಲೆಂದು ಮೌನವೃತ ಸಹ ಕೈಗೊಂಡಿದ್ದಾರೆ.
ಪಟ್ಟಣದ ಹೊಸೂರ ನಲ್ಲಿರುವ ಶ್ರೀಮಠದಲ್ಲಿ ಆಳೆತ್ತರದ ಹೊಂಡ ತೋಡಿ ಅದರಲ್ಲಿ ನೀರು ತುಂಬಿ ಅದರಲ್ಲಿ ಕುಳಿತು ಗ್ರಹಣದಿಂದ ಆಗುವ ತೊಂದರೆಗಳನ್ನು. ತಡೆಗಟ್ಟುವುದು ಹಾಗೂ ಗ್ರಹಣದಿಂದ ಮಂತ್ರ ಪಠಣ ಸಿದ್ದಿ ಮಾಡುವ ಸಲುವಾಗಿ ಈ ರೀತಿ ತಪಸ್ಸು ಕುಳಿತು ಕೊಳ್ಳಲಾಗುತ್ತದೆ. ಸಾಮನ್ಯವಾಗಿ 21 ದಿನ ಇಲ್ಲವೇ 40 ದಿನ ತಪಸ್ಸು ಕುಳಿತು ಸಿದ್ದಿ ಮಾಡಿಕೊಂಡರೆ ಆಗ ಅಂದುಕೊಂಡಿದ್ದು ನೆರವೇರುವ ಶಕ್ತಿ ಸಿಗಲಿದೆ ಎಂಬ ಅಭಿಪ್ರಾಯವಿದೆ. ಈ ಸೂರ್ಯ ಗ್ರಹಣ ಒಳ್ಳೆಯ ಗೋಚರ ಶಕ್ತಿ ಹೊಂದಿರುವುದರಿಂದ ಸಾಕಷ್ಟು ದಿನ ಕೈಗೊಳ್ಳುವ ತಪ್ಪಸ್ಸಿನ ಬದಲಿಗೆ ಈ ಒಂದು ದಿನ ಇತರ ತಪಸ್ಸು ಮಾಡಿದರೂ ಇಷ್ಟಾರ್ಥಗಳು ಸಿದ್ಧಿ ಮಾಡಿಕೊಳ್ಳಬಹುದು. ಅದಕ್ಕಾಗಿ ಈ ತಪಸ್ಸು ಮಾಡುತ್ತಿದ್ದೇವೆ ಎಂದು ಶ್ರೀಗಳು ತಿಳಿಸುತ್ತಾರೆ. ಗ್ರಹಣ ಬಿಟ್ಟನಂತರ ಮಠದಲ್ಲಿ ವಿಶೇಷ ಪೂಜೆ ಕೈಗೊಂಡರು.