ಜೀವ ಸಂಕುಲದ ಉಗಮ ಹೇಗಾಯಿತು? ಮನುಷ್ಯ ಜನ್ಮ ತಾಳಿದ್ದು ಹೇಗೆ? ಸೃಷ್ಠಿ ಮೂಲದ ಬಗ್ಗೆ ಉಪನಿಷತ್ ನಲ್ಲಿದೆ ಸ್ಪಷ್ಟ ಸಂದೇಶ
ಮನುಷ್ಯನ ಉಗಮ ಹೇಗಾಯಿತು? ಸೃಷ್ಠಿಯ ಮೂಲ ಯಾವುದು? ಮನುಷ್ಯ ಹುಟ್ಟುವ ಮುಂಚೆ ಏನಾಗಿದ್ದ ಮತ್ತು ಸಾವಿನ ನಂತರ ಏನಾಗಲಿದೆ ಎಂಬ ವಿಚಾರ ನಾಗರಿಕತೆ ಉದಯವಾದಾಗಿನಿಂದ ಈವರೆಗೂ ಕಾಡುತ್ತಲೇ ಇದೆ.
ವಿಜ್ಞಾನಿಗಳು ಆ ಬಗ್ಗೆ ನಿರಂತರ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಬಾಹ್ಯಾಕಾಶದಲ್ಲಿ, ಸಾಗರದಾಳದಲ್ಲಿ, ಗಿರಿ- ಶಿಖರಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಸಂಶೋಧನೆ ನಿರಂತರವಾಗಿ ನಡೆಯುತ್ತಿದ್ದರೂ ನಿಖರ ಉತ್ತರ ಇನ್ನೂ ಸಿಕ್ಕಿಲ್ಲ.
ಆದರೆ, ಜೀವ ಸಂಕುಲದ ಸೃಷ್ಠಿಯ ಬಗ್ಗೆ ಭಾರತದ ಪುರಾತನ ಗ್ರಂಥಗಳಲ್ಲಿ ಅತ್ಯಂತ ನಿಖರವಾಗಿ ಉಲ್ಲೇಖಿಸಿದ್ದಾರೆ.
ಮುಂಡಕೋಪನಿಷತ್ ನಲ್ಲಿ ಈ ಬಗ್ಗೆ ಉಲ್ಲೇಖವಿದ್ದು, ಅದರ ಒಂದು ಶ್ಲೋಖದ ಸಾರ ಹೀಗಿದೆ- ಪುರುಷನಿಂದ ಅಗ್ನಿ ಹುಟ್ಟುತ್ತದೆ. ಅದಕ್ಕೆ ಸೂರ್ಯನೇ ಸಮಿತ್ತು. ಅಗ್ನಿಯಿಂದ ಸೋಮನು ಹುಟ್ಟುತ್ತಾನೆ. ಬಳಿಕ ಪರ್ಜನ್ಯ ಮತ್ತು ಅದರಿಂದ ಸಸ್ಯಗಳು ಹುಟ್ಟುತ್ತವೆ. ಸಸ್ಯದ ಪರಿಣಾಮ ರೇತಸ್ಸು. ಅದನ್ನು ಪುರುಷನು ಸ್ತ್ರೀ ಯಲ್ಲಿ ಸಿಂಚನ ಮಾಡುತ್ತಾನೆ. ಆಗ ಅನೇಕ ಪ್ರಜೆಗಳು ಹುಟ್ಟುತ್ತಾರೆ.
ನಿಮ್ಮ ತಪ್ಪು ಎತ್ತಿ ತೋರಿಸುವವರಿಗೆ ಹೀಗೊಂದು ಸವಾಲೆಸೆದು ನೋಡಿ-ಮಹತ್ತರ ಸಂದೇಶ ಓದಿ, ಇತರರಿಗೂ ಓದಿಸಿ.
ಇಲ್ಲಿ ಅಕ್ಷರ ಪುರುಷನೆಂದರೆ ಶಿವ. ಅವನು ಅವ್ಯಯ, ಅನಂತ, ಅಮೂರ್ತ. ಅವನಲ್ಲಿ ಅವನದ್ದೇ ಆದ ಅಪ್ರತಿಮ ಶಕ್ತಿಯಿದೆ. ಆ ಶಿವನಿಗೂ ಆ ಶಕ್ತಿಗೂ ಅಗಲದಷ್ಟು ಅನ್ಯೋನ್ಯ ಸಂಬಂಧ. ಇವರಿಬ್ಬರ ಅನ್ಯೋನ್ಯತೆಗೆ ಶಿವ- ಶಕ್ತಿ ಸಂಪುಟ ಎನ್ನುತ್ತಾರೆ. ಹಿರಣ್ಯಗರ್ಭದಿಂದ ಮೊದಲು ಮಾಡಿ ಭೂಮಿಯವರೆಗೆ ಇರುವ ಸಕಲ ವಸ್ತುಗಳು ಆ ಸಂಪುಟದಿಂದಲೇ ತೋರಿ ಬಂದಿವೆ. ಆದುದರಿಂದ ಪ್ರತಿ ವಸ್ತುವಿನಲ್ಲೂ ಶಿವನ ಚಿದವತರಣವಿದೆ; ಶಕ್ತಿಯ ಜಡಾಂಶವಿದೆ. ಶಕ್ತಿಯು ವಿಕರಿಸಿ ಬೇರೆ ಬೇರೆ ರೂಪು ತಳೆದಂತೆಲ್ಲ ಅದರಲ್ಲಿ ಆತನ ಚಿತ್ಪ್ರಭೆ ಅವತರಿಸುತ್ತದೆ. ಹಿರಣ್ಯ ಗರ್ಭವೇ ಶಕ್ತಿಯ ಪ್ರಥಮ ವಿಕಾರ. ಅದರಲ್ಲಿರುವ ಸಚ್ಚಿದ್ಭಾವವೇ ಶಿವನ ಪ್ರಥಮ ಅವತರಣ. ಎರಡರ ಯುತಿಯೇ ಪ್ರಥಮ ಬ್ರಹ್ಮ. ಜೀವಾತ್ಮ ನೂ ಹಾಗೆಯೇ. ಶಕ್ತಿಯು ವಿಕರಿಸಿ ದೇಹ- ಇಂದ್ರೀಯ-ಅಂತಃಕರಣಗಳ ಮೊತ್ತವಾಯಿತು. ಶಿವನ ಅಂಶ ಅದರಲ್ಲಿ ಅವತರಿಸಿ ಜೀವನ ಎನ್ನಿಸಿತು.
ಜೀವನ ಹುಟ್ಟಲಿಲ್ಲ; ಅವತರಿಸಿದ. ದೇಹಾದಿಗಳಹ ಅವತರಿಸಲಿಲ್ಲ, ನಿರ್ಮಾಣವಾದವು. ನಿರ್ಮಾಣವಾದದ್ದೆಲ್ಲ ಶಕ್ತಿಯ ರೂಪ. ಅವತರಿಸಿದ್ದೆಲ್ಲ ಶಿವನ ರೂಪ. ಇದನ್ನು ಜೀವನು ಮರೆತರೆ ಅಪರಾ ವಿದ್ಯೆಯ ಕಕ್ಷೆಗೆ ಸಿಲುಕಿ ಪರಿತಪಿಸುತ್ತಾನೆ. ಅರಿತರೆ ಪರಾವಿದ್ಯೆಯ ಮಂಡಲವೇರಿ ಶಿವನಲ್ಲಿ ಸಮರಸನಾಗುತ್ತಾನೆ.
ಜೀವಿಯ ಅವತರಣಾ ವಿಧಾನಕ್ಕೆ ಪಂಚಾಗ್ನಿ ಕ್ರಮ ಎಂದು ಕರೆಯಲಾಗಿದೆ. ದ್ಯೂಲೋಕ ಪ್ರಥಮಾಗ್ನಿ, ಪರ್ಜನ್ಯವು ದ್ವಿತೀಯ ಅಗ್ನಿ, ಪ್ರಥ್ವಿ ತೃತೀಯ ಅಗ್ನಿ, ಪುರುಷ ಚತುರ್ಥಾಗ್ನಿ, ಸ್ತ್ರೀಯು ಪಂಚಮಾಗ್ನಿ. ಹಿರಣ್ಯಗರ್ಭಸ್ತರದಿಂದ ಮೊದಲಿಗೆ ಜೀವನು ದ್ಯೂಲೋಕವೆಂಬ ಅಗ್ನಿಹಲ್ಲಿ ಹವನಗೊಳ್ಳುತ್ತಾನೆ. ಅಲ್ಲಿ ಕೆಲ ಕಾಲ ಬಾಳಿ ಬೆಂದು ಮೇಘಾಗ್ನಿ (ಪರ್ಜನ್ಯ)ಯಲ್ಲಿ ಬೀಳುತ್ತಾನೆ. ಸ್ಥೂಲ, ಸೂಕ್ಷ್ಮ ಮೇಘವಾಗಿ ಹಲವು ಕಾಲ ಆಕಾಶದಲ್ಲಿ ಸುತ್ತುತ್ತಾನೆ. ಅಲ್ಲಿಂದ ಒಂದು ದಿನ ಮಳೆಯ ಹನಿಯೊಂದಿಗೆ ಭೂಮಿ ಎಂಬ ಅಗ್ನಿಯಲ್ಲಿ ಹುತನಾಗುತ್ತಾನೆ. ಸಸ್ಯಗಳಲ್ಲಿ ಸೇರಿಕೊಳ್ಳುತ್ತಾನೆ. ಎಲೆ, ಹೂ, ಹಣ್ಣು ಕಾಯಿಗಳಲ್ಲಿ ಚರಿಸುತ್ತಾನೆ. ಆ ಬಳಿಕ ಪುರುಷನ ಜಠರಾಗ್ನಿ ಸೇರಿ, ಪಾಕವಾಗಿ, ಕೊನೆಗೆ ವೀರ್ಯದಲ್ಲಿ ಇಳಿಯುತ್ತಾನೆ. ಅಲ್ಲಿಂದ ಸ್ತ್ರೀಯ ಗರ್ಭಾಶಯದಲ್ಲಿ ಆಹುತಗೊಂಡು ಕೆಲ ಕಾಲ ವಾಸ ಮಾಡುತ್ತಾನೆ. ದೇಹ ಬೆಳೆದು ಪೂರ್ಣಗೊಂಡಾಗ ಆ ದೇಹ ಹೊತ್ತು ಭೂಮಿಗೆ ಬರುತ್ತಾನೆ. ಇದು ಜೀವಾತ್ಮನ ಪಂಚಸ್ಥರ ಅವತರಣಾ ಬಗೆ ಎಂದು ಉಲ್ಲೇಖಿಸಲಾಗಿದೆ.
(ಕೃಪೆ- ಜ್ಞಾನಯೋಗ ಸಂಪುಟ-೨)