ಮನೆಯ ಬೀಗ ಒಡೆದು ಚಿನ್ನ, ಬೆಳ್ಳಿ, ಹಣ ಕಳ್ಳತನ
ವಿಜಯಪುರ: ಮನೆಯ ಬೀಗ ಒಡೆದು ಮನೆಯಲ್ಲಿದ ಚಿನ್ನ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕದ್ದುಕೊಂಡು ಎಸ್ಕೇಪ್ ಆಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿ ನಡೆದಿದೆ. ಬೀಗ ಹಾಕಿದ್ದ ಮನೆಯ ಬೀಗ ಒಡೆದು ಈ ಕೃತ್ಯ ಎಸಗಿದ್ದಾರೆ. ಮಹಮದ್ ಹುಸೇನ್ ಎಂಬುವವರ ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿಆಭರಣ ಹಾಗೂ ನಗದು ಕದ್ದು ಕದೀಮರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು. ಕದೀಮರ ಪತ್ತೆಗೆ ಪೊಲೀಸರು ಶೋಧಕ್ಕೆ ಮುಂದಾಗಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.