ಹೋಳಿ ಹಬ್ಬದಂದು ಮುಸ್ಲಿಂ ಮುಖಂಡ ಮಾಡಿದ್ದೇನು? ಹಿಂದುಗಳ ಹಬ್ಬದ ಬಗ್ಗೆ ಏನಂದ್ರು ಗೊತ್ತಾ? ಹಮೀದ್ ಮುಶ್ರೀಪ್ ಬಾಯಿಯಿಂದಲೇ ಕೇಳಿ…..
ವಿಜಯಪುರ: ದೇಶದಲ್ಲಿ ಹಿಂದು-ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ಉಂಟಾಗಿ ಪರಸ್ಪರ ಕಲಹಗಳು ಹೆಚ್ಚುತ್ತಿವೆ. ಅಂಥದರಲ್ಲಿ ಇಲ್ಲೊಬ್ಬ ಮುಸ್ಲಿಂ ನಾಯಕ ಹೋಳಿ ಹುಣ್ಣಿಮೆಯಂದು ವಿಶಿಷ್ಟ ನಡೆ-ನುಡಿಯ ಮೂಲಕ ಗಮನ ಸೆಳೆದಿದ್ದಾನೆ. ಯಾರಪ್ಪಾ ಆ ನಾಯಕ? ಆತ ಮಾಡಿದ್ದೇನು? ಎಂಬ ಕುತೂಹಲವೇ? ಈ ವರದಿ ನೋಡಿ….
ಹಿಂದು-ಮುಸ್ಲಿಂ ಧರ್ಮಾಧಾರಿತ ಚುನಾವಣೆಗೆ ಮುನ್ನುಡಿ ಬರೆದಿದ್ದ ವಿಜಯಪುರ ನಗರ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಮೀದ್ ಮುಶ್ರೀಫ್ ಶುಕ್ರವಾರ ಹೋಳಿ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ವಿವಿಧ ಸಮುದಾಯದ ಮುಖಂಡರು, ಸಂಘಟಕರೊಂದಿಗೆ ಸೇರಿ ಸಂಭ್ರಮದಿಂದ ಹೋಳಿ ಆಚರಿಸಿದ ಅವರು, ಭಾರತದ ಎಲ್ಲ ಜಾತಿ, ಧರ್ಮಗಳು ಒಂದೊಂದು ಬಣ್ಣದಂತೆ. ಏಳು ಬಣ್ಣಗಳು ಸೇರಿ ಕಾಮನಬಿಲ್ಲು ಆಗುವಂತೆ ಎಲ್ಲ ಧರ್ಮಗಳು ಸೇರಿ ಭವ್ಯ ಭಾರತ ನಿರ್ಮಾಣವಾಗಿದೆ. ಎಲ್ಲ ಬಣ್ಣಗಳಂತೆ ಎಲ್ಲ ಸಮುದಾಯದವರೂ ಒಂದಾಗಿ ಇರಬೇಕು. ವಿವಿಧತೆಯಲ್ಲಿ ಏಕತೆ ಹೊಂದಿದ ಭಾರತದಲ್ಲಿ ಎಲ್ಲರೂ ಒಟ್ಟಾಗಿ ಹಬ್ಬ ಹರಿದಿನಗಳನ್ನು ಆಚರಿಸಬೇಕು. ಅಂದಾಜ ಜಾತ್ಯಾತೀತ ಭಾರತದ ಆಶಯ ಈಡೇರಿದಂತಾಗುತ್ತದೆ. ಸದ್ಭಾವನೆ, ಭಾವೈಕ್ಯತೆಯಿಂದ ಎಲ್ಲ ಹಬ್ಬಗಳನ್ನು ಆಚರಿಸೋಣ ಎಂದರು.
ವೈಜನಾಥ ಕರ್ಪೂರಮಠ, ಕಲ್ಲಪ್ಪ ಪಾರಶೆಟ್ಟಿ, ಇರ್ಫಾನ್ ಶೇಖ್, ಮೈನುದ್ದೀನ್ ಅಗಸಬಾಳ, ಈರಪ್ಪಾ ಕುಂಬಾರ, ರವೀಂದ್ರ ಜಾಧವ, ಧನರಾಜ, ಅರುಣ ಭಜಂತ್ರಿ, ಅನೀಲ ಸೂರ್ಯವಂಶಿ, ಅಲ್ಲಾಪೀರ ಮೀರಜಕರ, ರಮೇಶ ಮೋದಿ, ಚಂದ್ರಶೇಖರ ಪೂಜಾರಿ, ಆಬೀದ್ ಸಂಗಮ, ತಾಜುದ್ದೀನ್ ಅತ್ತಾರ ಮತ್ತಿತರರು ಇದ್ದರು.