ರಾಜ್ಯ ಸುದ್ದಿ

ಶಾಸಕ ಯತ್ನಾಳಗೆ ಕೋರ್ಟ್ ನೊಟೀಸ್, ಕಾರಣ ಏನು ಗೊತ್ತಾ?

ಬೆಂಗಳೂರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಕೋರ್ಟ್ ನೊಟೀಸ್ ಜಾರಿಯಾಗಿದೆ. ಕಾರಣ ಏನು ಗೊತ್ತಾ? ಲೋಕ ಸಭೆ ಚುನಾವಣೆ ಸಂದರ್ಭ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲರ ಮೇಲೆ ಭ್ರಷ್ಟಾಚಾರದ ಗುರುತರ ಆರೋಪ ಮಾಡಿದ್ದರು. ಈ ಆರೋಪದಿಂದ ತಮ್ಮ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಸಚಿವ ಶಿವಾನಂದ ಪಾಟೀಲರು ಮಾನ ನಷ್ಟ ಮೊಕದ್ದಮೆ ದಾಖಲಿಸುವಂತೆ ಖಾಸಗಿ ದೂರು ನೀಡಿದ್ದರು. ಹೀಗಾಗಿ ಶಿವಾನಂದ ಪಾಟೀಲರ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಯತ್ನಾಳರಿಗೆ ನೊಟೀಸ್ ಜಾರಿಗೊಳಿಸಿದೆ.

error: Content is protected !!