ರಾಜ್ಯ ಸುದ್ದಿ

ವೀರಯೋಧನ ನಿಧನಕ್ಕೆ ಕಂಬನಿ ಮಿಡಿದ ದೇಶಭಕ್ತರು

ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಂತಿಮ ಸಂಸ್ಕಾರ

ವಿಜಯಪುರ: ಜಮ್ಮು- ಕಾಶ್ಮೀರದಲ್ಲಿ ಕರ್ತವ್ಯ ನಿರತ ಯೋಧ ವೀರ ಮರಣ ಹೊಂದಿದ್ದು, ಬುಧವಾರ ತವರಿನಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ವಿಜಯಪುರ ಜಿಲ್ಲೆಯ ತಿಕೋಟಾದ ವೀರಯೋಧ ರಾಜು ಗಿರಮಲ್ಲ ಕರ್ಜಗಿ ನಿಧನಕ್ಕೆ ಇಡೀ ಜಿಲ್ಲೆಯೇ ಕಂಬನಿ ಮಿಡಿಯಿತು. ಬುಧವಾರ ಬೆಳಗ್ಗೆ ಯೋಧನ ಪಾರ್ಥಿವ ಶರೀರ ತರುತ್ತಿದ್ದಂತೆ ಮಡುಗಟ್ಟಿದ್ದ ಶೋಕದ ಕಟ್ಟೆಯೊಡೆಯಿತು. ಹಿಡಿದಿಟ್ಟ ದುಃಖ ಉಮ್ಮಳಿಸಿತು‌. ಮಕ್ಕಳಾದಿಯಾಗಿ ಮಹಿಳೆಯರು, ವೃದ್ಧರು….ಅಪಾರ ಜನಸ್ತೋಮ ಜಯಘೋಷದೊಂದಿಗೆ ಅಂತಿಮ ಸಂಸ್ಕಾರ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ತಿಕೋಟಾ ಪಟ್ಟಣದ ವಾಡೆ ಮೈದಾನದಲ್ಲಿ ಸಾರ್ವಜನಿಕರು ಗಣ್ಯರು ಅಂತಿಮ ದರ್ಶನ ಪಡೆದರು. ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ತಿಕೋಟಾ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ‌ಸಂಸ್ಕಾರ ನೆರವೇರಿತು. ಪತ್ನಿ ಸುಧಾ ಅವರಿಗೆ ಸೇನಾ ಅಧಿಕಾರಿಗಳು ಧ್ವಹ ಹಸ್ತಾಂತರ ಮಾಡಿದರು. ಇಡೀ ಜಿಲ್ಲೆಯ ಗಣ್ಯರು ಪಾಲ್ಗೊಂಡಿದ್ದರು.

error: Content is protected !!