ನಮ್ಮ ವಿಜಯಪುರರಾಜ್ಯ ಸುದ್ದಿ

ಕೃಷ್ಣಾತೀರದಲ್ಲಿ ತೆಪ್ಪದ ದುರಂತ, ಸತ್ತವರೆಷ್ಟು-ಉಳಿದವರೆಷ್ಟು? ಇಲ್ಲಿದೆ ಡಿಟೇಲ್ಸ್

ಕೃಷ್ಣಾತೀರದಲ್ಲಿ ತೆಪ್ಪದ ದುರಂತ, ಸತ್ತವರೆಷ್ಟು-ಉಳಿದವರೆಷ್ಟು? ಇಲ್ಲಿದೆ ಡಿಟೇಲ್ಸ್

ವಿಜಯಪುರ: ಕೊಲ್ಹಾರ ಪಟ್ಟಣದ ಕೃಷ್ಣಾ ನದಿ ತಟದಲ್ಲಿ ಮಂಗಳವಾರ ಸಂಜೆ ನಡೆದ ತೆಪ್ಪದ ಅವಘಡದಲ್ಲಿ ನೀರುಪಾಲಾಗಿದ್ದ, ಎಂಟು ಜನರ ಪೈಕಿ ಮೂವರು ಬಚಾವ್ ಆಗಿದ್ದು, ಮೂವರು ಅಸುನೀಗಿದ್ದಾರೆ. ಇನ್ನುಳಿದ ಇಬ್ಬರಿಗಾಗಿ ಶೋಧ ಕಾರ್ಯ ಪ್ರಗತಿಯಲ್ಲಿದೆ.
ಪುಂಡಲಿಕ ಯಂಕಂಚಿ (36), ತಯೂಬ್ ಚೌಧರಿ (35) ಹಾಗೂ ದಶರಥ ಗೌಡರ (60) ಎಂಬುವರು ಮೃತರಾಗಿದ್ದು, ಶವ ಪತ್ತೆಯಾಗಿದೆ. ಮೆಹಬೂಬ ವಾಲಿಕಾರ (40), ರಫೀಕ್ ಆಲಮೇಲ (45) ಇವರಿಗಾಗಿ ಹುಡುಕಾಟ ನಡೆದಿದೆ. ಬಶೀರ್ ಹೊನವಾಡ, ಫಾರುಕ್ ಫತ್ತೇಹ್ಮದ ಹಾಗೂ ಸಚೀನ ಕಟಬರ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ತೆಪ್ಪ ಹತ್ತಿ ನದಿಗೆ ಇಳಿದಿದ್ದ ವೇಳೆ ಇದ್ದಕ್ಕಿದ್ದಂತೆ ತೆಪ್ಪ ಪಲ್ಟಿಯಾಗಿತ್ತು. ಎಸ್‌ಪಿ ಋಷಿಕೇಶ ಸೋನಾವಣೆ, ಎಎಸ್‌ಪಿ ಶಂಕರ ಮಾರಿಹಾಳ ಮತ್ತಿತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಸ್ಥಳಕ್ಕಾಗಿಮಿಸಿ ಬೋಟ್‌ಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದರು. ಮೀನಿನ ಬಲೆಗೆ ಸಿಕ್ಕಿಬಿದ್ದಿದ್ದ ದಶರಥ ಗೌಡರ ಎಂಬಾತನ ಶವ ಹರಸಾಹಸ ಪಟ್ಟು ತೆಗೆಯಲಾಗಿತ್ತು. ಅದೇ ರೀತಿ ಇನ್ನುಳಿದ ಇಬ್ಬರ ಶವ ಕೂಡ ದೊರೆತಿದೆ. ಶವಗಳನ್ನು ಆಂಬುಲೆನ್ಸ್ ಸಹಾಯದಿಂದ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.

error: Content is protected !!