ನಮ್ಮ ವಿಜಯಪುರ

ಬಿಎಲ್‌ಡಿಇಯಲ್ಲಿ ಗಮನ ಸೆಳೆದ ಪುರುಷರು, 15ಜನರಿಗೆ ಸಂತಾನ ಹರಣ ಚಿಕಿತ್ಸೆ

ಸರಕಾರ್ ನ್ಯೂಸ್‌ ವಿಜಯಪುರ

ಸಂತಾನ ಹರಣ ಚಿಕಿತ್ಸೆಗೆ ಒಳಗಾಗುವ ಮೂಲಕ ಜಿಲ್ಲೆಯ 15 ಪುರುಷರು ಗಮನ ಸೆಳೆದಿದ್ದಾರೆ.

ಬಿಎಲ್‌ಡಿಇ ಡೀಮ್ಡ್ ವಿವಿಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆ ಶಿಬಿರ ನಡೆಯಿತು.

ಡಾ.ಗಿರೀಶ ಕುಲ್ಲೋಳ್ಳಿ, ಡಾ.ತೇಜಸ್ವೀನಿ ವಲ್ಲಭ ಹಾಗೂ ಡಾ.ಎಂ.ಬಿ.ಪಾಟೀಲ ಶಸ್ತ್ರಚಿಕಿತ್ಸಾ ತಂಡವು ಈ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ಆಗಮಿಸಿದ 15 ಜನ ಪುರುಷರು ಸಂತಾನ ಹರಣ ಶಸ್ತ್ರಚಿಕಿತ್ಸೆ ನೇರವೇರಿಸಿದರು.

ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಶ ಚವಾಣ್, ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ, ಡಾ.ಟಿ.ಎ.ಹಿಟ್ನಳ್ಳಿ, ಡಾ.ಬಾಲಕೃಷ್ಣ.ಜಿ.ಕೆ, ಡಾ.ಸಂತೋಷ ಶೆಟ್ಟಿ ಮತ್ತಿತರರಿದ್ದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಮಾಡಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!