ಗೃಹ ರಕ್ಷಕ ಸೇವೆಗೆ ಅರ್ಜಿ ಆಹ್ವಾನ, ತ್ವರಿತವಾಗಿ ಹೆಸರು ನೋಂದಾಯಿಸಿ
ಸರಕಾರ್ ನ್ಯೂಸ್ ವಿಜಯಪುರ
ಜಿಲ್ಲೆಯ ಗೃಹರಕ್ಷಕದಳದ ಘಟಕದಲ್ಲಿ ಖಾಲಿ ಇರುವ “ನಿಷ್ಕಾಮ ಸೇವೆ” ತತ್ವದ ಅಡಿಯಲ್ಲಿ ಸ್ವಯಂ ಸೇವೆ ಸಲ್ಲಿಸಲು ತಯಾರಿರುವ ಅಭ್ಯರ್ಥಿಗಳನ್ನು ಗೃಹರಕ್ಷಕ ಸದಸ್ಯರನ್ನಾಗಿ ನೋಂದಣಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ 19 ರಿಂದ 40 ವರ್ಷ ವಯೋಮಾನದ 10 ನೇ ತರಗತಿ ಪಾಸಾದ ಅರ್ಹ (ಪುರುಷ) ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಿದವರನ್ನು ದೈಹಿಕ, ವೈದ್ಯಕೀಯ ಪರೀಕ್ಷೆ ಮತ್ತು ಪೊಲೀಸ್ ಅಧೀಕ್ಷಕರಿಂದ ಗುಣ ನಡತೆ ಪರಿಶೀಲನೆ ನಂತರ ಗೃಹರಕ್ಷಕ ಸದಸ್ಯರನ್ನಾಗಿ ನೋಂದಣಿ ಮಾಡಿಕೊಳ್ಳಲಾಗುವುದು.
ಗೃಹರಕ್ಷಕ ಸದಸ್ಯರಾಗಿ ನೋಂದಣಿಯಾದ ಸದಸ್ಯರು ಪೊಲೀಸ ಇಲಾಖೆಯ ಜೊತೆಗೆ ಶಿಸ್ತು ಪಾಲನೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಹಾಗೂ ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಮಾತ್ರ ಸರ್ಕಾರ ನಿಗದಿ ಪಡಿಸಿದ ಗೌರವ ಧನವನ್ನು ನೀಡಲಾಗುವುದು. ಇದು ಸಂಪೂರ್ಣ ನಿಷ್ಕಾಮ ಸೇವಾ ಸಂಸ್ಥೆಯಾಗಿದ್ದು ಯಾವುದೇ ಸಂಬಳ ಇರುವುದಿಲ್ಲ. ಗೃಹರಕ್ಷಕ ಸದಸ್ಯರಾಗಿ ನೋಂದಣಿಯಾದ ಸದಸ್ಯರ ಕಾಲಾವಧಿ ಮೂರು (03) ವರ್ಷದ್ದಾಗಿರುತ್ತದೆ.
ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಉಚಿತ ಪಡೆದು, ಎಸ್.ಎಸ್.ಎಲ್.ಸಿ. ಮೇಲ್ಪಟ್ಟ ವರ್ಗಾವಣೆ ಪ್ರಮಾಣಪತ್ರ, ಎಸ್.ಎಸ್.ಎಲ್.ಸಿ.ಮೇಲ್ಪಟ್ಟ ಅಂಕಪಟ್ಟಿ. ಆಧಾರ ಕಾರ್ಡ, ಮತದಾರರ ಗುರುತಿನ ಚೀಟಿ, ಸರ್ಕಾರಿ ವೈದ್ಯಾಧಿಕಾರಿಗಳಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ (ಮೂಲ ಪ್ರತಿ), ಇತ್ತೀಚಿನ 02 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ದಿನಾಂಕ : 12-12-2022ರೊಳಗೆ ಅರ್ಜಿ ಸಲ್ಲಿಸಬೇಕು ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಎಂ.ಎಂ.ಪೂಜಾರ ಮೊ: 9845250288 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್‌ಸ್ಕ್ರೈಬ್ ಮಾಡಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)