ಭೀಮಾತೀರದಲ್ಲಿ ಭೀಕರ ಅಪಘಾತ | ಇಬ್ಬರ ಸಾವು
ವಿಜಯಪುರ: ಭೀಕರ ಅಪಘಾತದಲ್ಲಿ ಇಬ್ಬರ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ರೂಗಿ ಕ್ರಾಸ್ ಬಳಿಯ ಸುಲಗಮ್ಮದೇವಿ ಮಠದ ಬಳಿ ನಡೆದಿದೆ. ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಪೌಂಡ್‌ಗೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ನಾಗೇಶ ನಾವಿ 27, ಸಿದ್ದು ಬಿರಾದಾರ 37 ಮೃತಪಟ್ಟಿದ್ದಾರೆ. ಮೃತಪಟ್ಟಿರುವ ಶವಗಳು ಇಂಡಿ ತಾಲೂಕಾಸ್ಪತ್ರೆಯಲ್ಲಿ ಶಿಫ್ಟ್ ಮಾಡಲಾಗಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.