ನಮ್ಮ ವಿಜಯಪುರ

ಬಸವನಾಡಿನಲ್ಲಿ ಭೀಕರ ಅಪಘಾತ | ಇಬ್ಬರ ಸಾವು

ವಿಜಯಪುರ: ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಗುದ್ದಿರುವ ಪರಿಣಾಮ
ಸ್ಥಳದಲ್ಲೆ ಇಬ್ಬರ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಮಾರ್ಗ ಮಧ್ಯದಲ್ಲಿ ನಡೆದಿದೆ. ಮಲ್ಲು ಡೋಲಗೊಂಡ (32) ಪರಶು ಮಿಣಜಿಗಿ(26) ಸ್ಥಳದಲ್ಲೆ ಅಸುನೀಗಿದ್ದಾರೆ. ಇನ್ನು ರಸ್ತೆಯ ಡಿವೈಡರಿಗೆ ಶಿಫ್ಟ್ ಕಾರು ಅಪಘಾತವಾಗಿದೆ. ಅಲ್ಲದೇ, ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವು ಆಗಿದೆ. ಒಬ್ಬನ ಸ್ಥಿತಿ ಗಂಭೀರವಾಗಿದೆ. ಎಲ್ಲರೂ ಮೂಲತಃ ಇಂಗಳೇಶ್ವರ ಗ್ರಾಮದವರು. ರೇವಣಸಿದ್ದ ಶೇಕಣ್ಣಿ (27) ಸ್ಥಿತಿ ಗಂಭೀರವಾಗಿದೆ. ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

error: Content is protected !!