ಗ್ಯಾಸ್ ಸೋರಿಕೆಯಿಂದಾಗಿ ಗುಡಿಸಲು ಭಸ್ಮ, ಎಲ್ಲಿ? ಏನಾಯಿತು?
ಸರಕಾರ್ ನ್ಯೂಸ್ ಮುದ್ದೇಬಿಹಾಳ
ಗುಡಿಸಲಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಆಕಸ್ಮಿಕವಾಗಿ ಸೋರಿಕೆಯಾಗಿ ನಾಲ್ಕು ಗಡಿಸಲುಗಳು ಭಸ್ಮವಾಗಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ಆಲೂರ ಗ್ರಾಮದಲ್ಲಿ ಶನಿವಾರ ನಡೆದಿದೆ.
ನಾಗೇಶ ರೆಡ್ಡಿ ಎಂಬುವರಿಗೆ ಸೇರಿದ ಗುಡಿಸಲು ಸೇರಿದಂತೆ ಒಟ್ಟು ನಾಲ್ಕು ಗುಡಿಸಲು ಬೆಂಕಿಗಾಹುತಿ ಆಗಿವೆ. ಮನೆಯಲ್ಲಿದ್ದ ಸುಮಾರು 2 ಲಕ್ಷಕ್ಕೂ ಅಧಿಕ ವಸ್ತುಗಳು ಹಾನಿ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮುದ್ದೇಬಿಹಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡ ಪರಿಶೀಲಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)